ಕೊಚ್ಚಿ: ಪ್ರಿಯಕರನಿಂದಲೇ ಮೇಕಪ್ ಆರ್ಟಿಸ್ಟ್ ಒಬ್ಬರು ಬರ್ಬರ ಹತ್ಯೆಯಾಗಿರುವ ಘಟನೆ ಕೇರಳದ ಕಾಸರಗೋಡಿನ ಕನ್ಹಂಗಾಡ್ನಲ್ಲಿರುವ ಲಾಡ್ಜ್ ಒಂದರಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಉದ್ಮಾ ಪಂಚಾಯಿತಿಯ ಮುಕ್ಕುನೋಥ್ ನಿವಾಸಿ ಪಿ.ಬಿ. ದೇವಿಕಾ (34) ಎಂದು ಗುರುತಿಸಲಾಗಿದೆ.
ಇನ್ನು ಹತ್ಯೆ ಮಾಡಿದ ಬಳಿಕ ಪ್ರಿಯಕರ ಸತೀಶ್ (36) ಲಾಡ್ಜ್ ರೂಮ್ ಅನ್ನು ಲಾಕ್ ಮಾಡಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ.
ಮಾಹಿತಿ ತಿಳಿದ ಪೊಲೀಸರು
ಸ್ಥಳಕ್ಕೆ ತೆರಳಿ ಲಾಡ್ಜ್ ರೂಮ್ ಅನ್ನು ತೆರೆದಾಗ ದೇವಿಕಾ ಕತ್ತು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದಳು ಎಂದು ಬಾಲಕೃಷ್ಣನ್ ನಾಯರ್ ಮಾಹಿತಿ ನೀಡಿದ್ದಾರೆ.