ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ: ಪ್ರಿಯಕರ ಸಾವು, ಯುವತಿ ಸ್ಥಿತಿ ಗಂಭೀರ

Prasthutha|

ಚಾಮರಾಜನಗರ: ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹನೂರು ತಾಲೂಕಿನ ಹೊಗೆನಕಲ್ ಫಾಲ್ಸ್ ಬಳಿ ನಡೆದಿದೆ.

- Advertisement -


ಕನಕಪುರ ಮೂಲದ ಉಮೇಶ್ (24) ಮೃತಪಟ್ಟಿದ್ದರೆ, ರಕ್ಷಿತಾ (16) ಸ್ಥಿತಿ ಗಂಭೀರವಾಗಿದೆ.


ಹೊಗೆನಕಲ್ ಫಾಲ್ಸ್ ಬಳಿ ಉಮೇಶ್ ಹಾಗೂ ರಕ್ಷಿತಾ ವಿಷ ಸೇವಿಸಿ ಬಿದ್ದು ಒದ್ದಾಡುತ್ತಿದ್ದರು. ಬಂಡೆಗಳ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದವರನ್ನು ಸ್ಥಳೀಯರು ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

- Advertisement -


ಉಮೇಶ್ ವಿಷ ಕುಡಿದು ಬಹಳ ಸಮಯವಾಗಿದ್ದರಿಂದ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ. ಸಾವು ಬದುಕಿನ ನಡುವೆ ಹೊರಾಡುತ್ತಿರುವ ರಕ್ಷಿತಾಗೆ ತಮಿಳುನಾಡಿನ ಧರ್ಮಪುರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರೇಮಿಗಳಿಬ್ಬರ ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.

Join Whatsapp