ಭೋಪಾಲ್: ಭಜರಂಗದಳ ಕಾರ್ಯಕರ್ತರು ಲವ್ ಜಿಹಾದ್ ನೆಪವೊಡ್ಡಿ ಮುಸ್ಲಿಮ್ ಯುವಕನನ್ನು ಪೊಲೀಸರಿಗೊಪ್ಪಿಸಿದ ಘಟನೆ ಮಧ್ಯಪ್ರದೇಶದ ಇಂದೋರ್’ನಲ್ಲಿ ನಡೆದಿದೆ. ಅನ್ಯಧರ್ಮೀಯ ಮಹಿಳೆಯೊಂದಿಗೆ ಸಂಪರ್ಕ ಹೊಂದಲು ನಕಲಿ ಗುರುತಿನ ಕಾರ್ಡ್ ತೋರಿಸಿ ಹೋಟೆಲ್ ಬುಕ್ ಮಾಡಿದ್ದ ಎಂದು ಆರೋಪ ಹೊರಿಸಲಾಗಿತ್ತು.
ಘಟನೆಯ ಕುರಿತು ಮಾತನಾಡಿದ ಭಜರಂಗದಳದ ಸ್ಥಳೀಯ ಸಂಚಾಲಕ ಶರ್ಮಾ, ಮುಸ್ಲಿಮ್ ವ್ಯಕ್ತಿಯೊಬ್ಬ ನಕಲಿ ಗುರಿತಿನ ಚೀಟಿಯನ್ನು ತೋರಿಸಿ ಲಸುಡಿಯಾ ಪ್ರದೇಶದಲ್ಲಿ ಹೋಟೆಲನ್ನು ಬುಕ್ ಮಾಡಿದ್ದಾನೆ ಮತ್ತು ಲವ್ ಜಿಹಾದ್ ಉದ್ದೇಶದಿಂದ ಹಿಂದೂ ಮಹಿಳೆಯನ್ನು ತನ್ನ ಕೋಣೆಗೆ ಕರೆಸಿಕೊಂಡಿದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಲವ್ ಜಿಹಾಬ್ ಎಂಬುದು ಸಂಘಪರಿವಾರ ತನ್ನ ರಾಜಕೀಯ ದುರುದ್ದೇಶಕ್ಕಾಗಿ ಮತ್ತು ಧಾರ್ಮಿಕ ಹಕ್ಕಿಗಾಗಿ ಬಳಸುವ ಕಪೋಲಕಲ್ಪಿತ ಪದವಾಗಿದ್ದು, ಲವ್ ಜಿಹಾದ್ ಮೂಲಕ ಮುಸ್ಲಿಮ್ ಯುವಕರು, ಹಿಂದೂ ಯುವತಿಯರನ್ನು ಮದುವೆಯಾಗಿ ಇಸ್ಲಾಮ್’ಗೆ ಮತಾಂತರಗೊಳಿಸುತ್ತಿದ್ದಾರೆ ಎಂದು ಸಂಘಪರಿವಾರ ಗೊಂದಲ ಸೃಷ್ಟಿಸುತ್ತಲೇ ಬಂದಿದೆ.
ಘಟನೆಯ ಕುರಿತು ಹೆಚ್ಚಿನ ತನಿಖೆಗಾಗಿ ಮುಸ್ಲಿಮ್ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ರಾಜೇಶ್ ವ್ಯಾಸ್ ತಿಳಿಸಿದ್ದಾರೆ.