ನವದೆಹಲಿ : ಬಿಜೆಪಿ ಆಡಳಿತದ ಉತ್ತರ ಪ್ರದೇಶದಲ್ಲಿ ‘ಲವ್ ಜಿಹಾದ್’ ಆರೋಪದಡಿ, ಹೊಸ ಬಲವಂತದ ಮತಾಂತರ ತಡೆ ಕಾನೂನಿನಲ್ಲಿ ದಾಖಲಾದ ಪ್ರಕರಣಗಳಿಗೆ ಸಂಬಂಧಿಸಿ ಇಲ್ಲಿ ವರೆಗೆ ಬಂಧಿತರಾಗಿರುವ 86 ಮಂದಿಯಲ್ಲಿ 79 ಮಂದಿ ಮುಸ್ಲಿಮರು. ಅದರಲ್ಲೂ ಇಟಾ ಜಿಲ್ಲೆಯಲ್ಲಿ ಒಬ್ಬ ಮುಸ್ಲಿಂ ವ್ಯಕ್ತಿಯ ಒಂದೇ ಕುಟುಂಬದ 26 ಮಂದಿಯನ್ನು ಬಂಧಿಸಲಾಗಿದೆ.
ಇಟಾದಲ್ಲಿ ಹಿಂದೂ ಮಹಿಳೆಯನ್ನು ಮತಾಂತರ ಮಾಡಿದ ಆರೋಪದಡಿ ಮುಸ್ಲಿಂ ವ್ಯಕ್ತಿಯ ಐವರು ಮಹಿಳೆಯರು ಸೇರಿದಂತೆ, 26 ಮಂದಿಯನ್ನು ಬಂಧಿಸಲಾಗಿದೆ. 2017ರಲ್ಲಿ ಮದುವೆ ನಡೆದಿದ್ದರೂ, ಹೊಸ ವಿಧೇಯಕ ಜಾರಿಗೆ ಬರುವ ಒಂದು ವಾರ ಮೊದಲು ಎಫ್ ಐಆರ್ ದಾಖಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕ್ರಮ ಕೈಗೊಂಡಿದ್ದಾರೆ.
ಮೌನಲ್ಲಿ ಕುಟುಂಬದ 16 ಮಂದಿಯ ವಿರುದ್ಧ ಎಫ್ ಐಆರ್ ದಾಖಲಾಗಿದೆ ಮತ್ತು ಇನ್ನೊಂದು ಪ್ರಕರಣದಲ್ಲಿ ಸೀತಾಪುರ್ ನಲ್ಲಿ 14 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.