ಧ್ವನಿವರ್ಧಕ ನಿಯಮ ಕೇವಲ ಆಝಾನ್ ಗೆ ಮಾತ್ರವೇ: ನೆಟ್ಟಿಗರ ಪ್ರಶ್ನೆ

ಮಂಗಳೂರು: ಧ್ವನಿವರ್ಧಕ ನಿಯಮ ಕೇವಲ ಆಝಾನ್ ಗೆ ಮಾತ್ರ ಅನ್ವಯವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ ಎಂದು ಈಗಾಗಲೇ ಸುಪ್ರೀಂಕೋರ್ಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ಇದನ್ನು ಕಟ್ಟುನಿಟ್ಟಿನ ಜಾರಿಗೆ ಸರ್ಕಾರ ಮುಂದಾಗಿದೆ. ಇದರ ಪರಿಣಾಮವೆಂಬಂತೆ ಬೆಳಗ್ಗಿನ ಆಝಾನ್ ಅನ್ನು ಧ್ವನಿವರ್ಧಕದಲ್ಲಿ ಕೊಡುವುದನ್ನು ನಿರ್ಬಂಧಿಸಲಾಗಿದೆ. ಆಝಾನ್ ನಿರ್ಬಂಧಿಸುವಂತೆ ಸಂಘಪರಿವಾರ ಸಂಘಟನೆಗಳು ಭಾರೀ ಅಭಿಯಾನವನ್ನು ನಡೆಸಿದ್ದವು.

- Advertisement -

ಆದರೆ ದಸರಾ ಸಂದರ್ಭದಲ್ಲಿ ಈ ನಿಯಮ ಪಾಲನೆಯಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಮಂಗಳೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಡಿಜೆ ಮತ್ತು ಡೋಲ್, ಮದ್ಯ ರಾತ್ರಿಯಲ್ಲಿ ! ಈಗ ಯಾರಿಗೂ ಸಮಸ್ಯೆ ಆಗುವುದಿಲ್ಲ. ಆದರೆ 3 ನಿಮಿಷದ ಅಝಾನ್ ಇಲ್ಲಿ ಪೋಲಿಸರಿಗೆ ಸಮಸ್ಯೆ, ಅಧಿಕಾರಿಗಳಿಗೆ ಸಮಸ್ಯೆ , ಸರ್ಕಾರಕ್ಕೆ ಸಮಸ್ಯೆ! ಎಂದು ಹಲವರು ಪ್ರಶ್ನಿಸಿದ್ದಾರೆ.

ರಾತ್ರಿ 10 ಗಂಟೆ ನಂತರ ಧ್ವನಿ ವರ್ಧಕ ಬಳಸುವಂತಿಲ್ಲ ಆದೇಶ ಈಗ ಇದಕ್ಕೆ ಅನ್ವಯಿಸುವುದಿಲ್ಲವೇ ? ಕಮಿಷನರ್ ಸಾಹೇಬ್ರೆ ? ಜಿಲ್ಲಾಧಿಕಾರಿಗಳೇ ? ಎಂದು ಇನ್ನು ಕೆಲವರು ಕೇಳಿದ್ದಾರೆ.

ಕಾನೂನು ಮತ್ತು ಸುವ್ಯವಸ್ಥೆ, ನಿಯಮಗಳು, ಕಾನೂನುಗಳು ಎಲ್ಲವೂ ದಸರಾ ಸಮಯದಲ್ಲಿ ಇಲ್ಲವಾಗಿದೆ. ಕಳೆದ ರಾತ್ರಿ ಮನೆಗೆ ಹೋಗಲು ಸುಮಾರು 45 ನಿಮಿಷಗಳ ಕಾಲ ಕಾಯಬೇಕಾಯಿತು ಎಂದು ವ್ಯಕ್ತಿಯೊಬ್ಬರು ಟ್ವೀಟ್ ನಲ್ಲಿ ಕಳೆದ ರಾತ್ರಿ ಅನುಭವಿಸಿದ ಕಷ್ಟವನ್ನು ಹಂಚಿಕೊಂಡಿದ್ದಾರೆ