ಅನ್ನಭಾಗ್ಯ ಅಕ್ಕಿ ತುಂಬಿದ ಲಾರಿಯನ್ನೇ ಕಳವುಗೈದ ಖದೀಮರು!

Prasthutha|

ಯಾದಗಿರಿ: ಅನ್ನಭಾಗ್ಯ ಅಕ್ಕಿ ತುಂಬಿದ್ದ ಲಾರಿಯನ್ನೇ ಕಳವು ಮಾಡಿದ ಕೃತ್ಯ ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಎಪಿಎಂಸಿ ಯಾರ್ಡ್​​ನಲ್ಲಿ ನಡೆದಿದೆ.

- Advertisement -

 ನ್ಯಾಯ ಬೆಲೆ ಅಂಗಡಿಗೆ ಸಾಗಿಸಲು ಎಪಿಎಂಸಿ ಯಾರ್ಡ್​​ನಲ್ಲಿ ಅಕ್ಕಿ ತುಂಬಿದ್ದ ಲಾರಿಯನ್ನು ನಿಲ್ಲಿಸಲಾಗಿತ್ತು. ಲಾರಿಯಲ್ಲಿ 20 ಟನ್ ಅಕ್ಕಿಯ 420 ಚೀಲಗಳಿದ್ದವು. ಇದೀಗ ಬಡವರ ಹೊಟ್ಟೆ ತುಂಬಲು ಬಳಕೆಯಾಗಬೇಕಿದ್ದ ಅಕ್ಕಿ ಕಳ್ಳರ ಪಾಲಾಗಿದೆ.

ಶಹಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಹಾಪುರ ಠಾಣೆಯ ಪಿಐ ಚೆನ್ನಯ್ಯ ಹಿರೇಮಠ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.