ಹೆಜಮಾಡಿ ಬಳಿ ಲಾರಿ ಬೆಂಕಿಗಾಹುತಿ : ಟೋಲ್ ಗೇಟ್ ಸಿಬ್ಬಂದಿ ವಿರುದ್ಧ ಸಾರ್ವಜನಿಕರ ಆಕ್ರೋಶ !

Prasthutha|

ಪಡುಬಿದ್ರಿ: ತಡರಾತ್ರಿ ಲಾರಿಯೊಂದು ಬೆಂಕಿಗಾಹುತಿಯಾದ ಘಟನೆ ಹೆಜಮಾಡಿ ಟೋಲ್ ಗೇಟ್ ಬಳಿ ಕಳೆದ ರಾತ್ರಿ ನಡೆದಿದೆ.

- Advertisement -

ಟೋಲ್ ಗೇಟ್ ಬಳಿ ಲಾರಿ ನಿಲ್ಲಿಸಿ ಲಾರಿಯ ಒಳಭಾಗದಲ್ಲಿ ಟೀ ಮಾಡಲು ಗ್ಯಾಸ್ ಉರಿಸುತ್ತಿದ್ದಾಗ ಆಕಸ್ಮಿಕವಾಗಿ ಲಾರಿಗೆ ಬೆಂಕಿ ಹತ್ತಿಕೊಂಡಿದ್ದು ತಕ್ಷಣ ಚಾಲಕ ಲಾರಿಯಿಂದ ಜಿಗಿದು ಸಣ್ನ ಪುಟ್ಟ ಗಾಯಗಳೊಂದಿಗೆ ಪ್ರಾಣ ಉಳಿಸಿಕೊಂಡಿದ್ದಾನೆ.

ಲಾರಿಗೆ ಬೆಂಕಿ ತಗುಲಿ ಅರ್ಧ ಗಂಟೆ ಮೀರಿದರೂ ಬೆಂಕಿ ನಂದಿಸಲು ಆಗ್ನಿ ಶಾಮಕ ವಾಹನ ಮತ್ತು ಚಾಲಕನನ್ನು ಆಸ್ಪತ್ರೆಗೆ ಸಾಗಿಲು ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಟೋಲ್ ಸಿಬ್ಬಂದಿ ಮಾಡದೇ ಇದ್ದುದ್ದರಿಂದ ಸಾರ್ವಜನಿಕರು ಟೋಲ್ ಪ್ಲಾಜಾ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಲ್ಲದೆ ರಕ್ಷಣೆಗೆ ದಾವಿಸಿದ ಸ್ಥಳೀಯರನ್ನು ಅಲ್ಲಿನ ಸಿಬ್ಬಂದಿ ಓಡಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

- Advertisement -

ಬಳಿಕ ಆಪತ್ಭಾಂದವ ಆಸಿಫ್ ಅವರು ತಮ್ಮ ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

Join Whatsapp