ಲಂಡನ್: ಭಾರತೀಯ ಮೂಲದ 4 ಮಂದಿಗೆ 28 ವರ್ಷ ಜೈಲುಶಿಕ್ಷೆ

Prasthutha|

ಲಂಡನ್: ಭಾರತೀಯ ಮೂಲದ ಚಾಲಕನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಭಾರತೀಯ ಮೂಲದವರೇ ಆದ 4 ಮಂದಿಗೆ 28 ವರ್ಷ ಜೈಲುಶಿಕ್ಷೆಯನ್ನು ಬ್ರಿಟನ್‌ನಲ್ಲಿ ವಿಧಿಸಲಾಗಿದೆ.

- Advertisement -

ಕಳೆದ ವರ್ಷದ ಆಗಸ್ಟ್ ನಲ್ಲಿ ಪಶ್ಚಿಮ ಇಂಗ್ಲೆಂಡಿನ ಶ್ರೂಸ್‍ಬರಿ ನಗರದ ಬೆರ್ವಿಕ್ ಅವೆನ್ಯೂ ಪ್ರದೇಶದಲ್ಲಿ ಆಹಾರ ಡೆಲಿವರಿ ನೀಡುವ ವ್ಯಾನ್‍ನ ಡ್ರೈವರ್ ಅರ್ಮಾನ್ ಸಿಂಗ್ ಮೇಲೆ ಹಲ್ಲೆ ನಡೆದಿರುವ ಬಗ್ಗೆ ಮಾಹಿತಿ ಪಡೆದ ಸ್ಥಳೀಯ ಪೊಲೀಸರು ಅಲ್ಲಿಗೆ ಧಾವಿಸಿದಾಗ ಆತ ಮೃತಪಟ್ಟಿದ್ದರು.

ಹರ್ಷದೀಪ್ ಸಿಂಗ್ , ಜಗದೀಪ್ ಸಿಂಗ್, ಶಿವದೀಪ್ ಸಿಂಗ್ ಮತ್ತು ಮನ್‍ಜೋತ್ ಸಿಂಗ್ ಕೊಡಲಿ, ಹಾಕಿಸ್ಟಿಕ್ ಮತ್ತು ರಾಡ್‍ನಿಂದ ಹಲ್ಲೆ ನಡೆಸಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು.

- Advertisement -

ಅದರಂತೆ 4 ಮಂದಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು.ಕೋರ್ಟಿನಲ್ಲಿ ನಾಲ್ಕು ಮಂದಿಯ ಕೊಲೆ ಅಪರಾಧ ಸಾಬೀತಾಗಿ ತಲಾ 28 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ.

5ನೇ ಆರೋಪಿ ಸುಖ್‍ಮಂದೀಪ್ ಸಿಂಗ್ ಡೆಲಿವರಿ ಚಾಲಕನ ಬಗ್ಗೆ ಮಾಹಿತಿ ನೀಡಿ ಹತ್ಯೆಗೆ ಸಹಕಾರ ನೀಡಿರುವುದು ಸಾಬೀತಾಗಿರುವುದರಿಂದ 10 ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದಾನೆ. ಆದರೆ ಹತ್ಯೆ ನಡೆಸಲು ಕಾರಣ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.



Join Whatsapp