ಮಾಜಿ ಸೈನಿಕನಿಂದ 10 ಲಕ್ಷ ಲಂಚ: ಮೂವರು ಲೋಕಾಯುಕ್ತ ಬಲೆಗೆ

Prasthutha|

ಬೆಂಗಳೂರು: ಮಾಜಿ ಸೈನಿಕರೊಬ್ಬರ ಬಳಿ ಲಂಚಕ್ಕೆ ಬೇಡಿಕೆಯಿಟ್ಟ ಚಿಕ್ಕಬಳ್ಳಾಪುರ ಜಿಲ್ಲೆಯ ಮೂವರು ಸರ್ಕಾರಿ ನೌಕರರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

- Advertisement -

ವೈಜಕೂರು ಕಂದಾಯ ವೃತ್ತದ ಗ್ರಾಮ ಸಹಾಯಕ ಎನ್.ಪ್ರಕಾಶ್ ಹಾಗೂ ಚಿಂತಾಮಣಿ ತಾಲೂಕು ಕಚೇರಿಯ ಸರ್ಕಾರಿ ಭೂಮಾಪಕ ಪಿ.ಎನ್ ನಾಗರಾಜ್ ಹಾಗೂ ರೈತ ಮುಖಂಡ ಕದಿರೇಗೌಡ ಲೋಕಾಯಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದು ಮೂವರನ್ನು ಬಂಧಿಸಲಾಗಿದೆ.

ಚಿಂತಾಮಣಿಯ ವೆಂಕಟಗಿರಿಕೋಟೆಯ ವಿನಾಯಕ ಬಡಾವಣೆಯ ನಿವಾಸಿ ಶಿವಾನಂದ ರೆಡ್ಡಿ ಮಾಜಿ ಸೈನಿಕನಾಗಿದ್ದು, ಮಾಜಿ ಸೈನಿಕ ಖೋಟಾದಡಿ ರಾಜ್ಯ ಸರ್ಕಾರಕ್ಕೆ ಜಮೀನು ಮಂಜೂರು ಮಾಡಿಕೊಡುವಂತೆ ಅರ್ಜಿ ಸಲ್ಲಿಸಿದ್ದರು. ಹಲವು ವರ್ಷಗಳಿಂದ ಮನವಿ ಸಲ್ಲಿಸಿದ್ದರೂ ಸರ್ಕಾರದಿಂದ ಇದುವರೆಗೂ ಜಮೀನು ಮಂಜೂರಾಗಿಲ್ಲ. ಇದರಿಂದ ಬೇಸತ್ತ ರೈತ ಮುಖಂಡ ಕದಿರೇಗೌಡ ಬಳಿ ಹೋಗಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದು, ಕದಿರೇಗೌಡ  ಗ್ರಾಮ ಸಹಾಯಕ ಪ್ರಕಾಶ್ ಹಾಗೂ ಭೂಮಾಪಕ ನಾಗರಾಜ್ ಜೊತೆ ಡೀಲ್ ಮಾತನಾಡಿ 10 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ನೊಂದ ಮಾಜಿ ಸೈನಿಕ ಶಿವಾನಂದರೆಡ್ಡಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿ, ಲೋಕಾಯುಕ್ತ ಪೊಲೀಸರು ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

ಶಿವಾನಂದ ರೆಡ್ಡಿ 1987ರಲ್ಲಿ ಸೈನ್ಯಕ್ಕೆ ಸೇರಿದ್ದು, 1999ರಲ್ಲಿ ಜಮ್ಮು-ಕಾಶ್ಮೀರದ ಪೂಂಚ್ ಸೆಕ್ಟರ್’ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ರಾತ್ರಿ ಗಸ್ತಿನಲ್ಲಿರುವಾಗ ಅಪಘಾತವಾಗಿ ಬಲಗಾಲಿಗೆ ಗಂಭೀರ ಗಾಯವಾದ ಕಾರಣ ಸೇವೆಯಿಂದ ನಿವೃತ್ತಿಯಾಗಿದ್ದರು.

ಸ್ವಂತ ಊರಲ್ಲಿ ಕೃಷಿ ಮಾಡಿಕೊಂಡು ಬದುಕು ಸಾಗಿಸಲು ಜಮೀನು ಮಂಜೂರಾತಿಗೆ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಜಮೀನು ಪಡೆಯಲು ಪ್ರತಿಭಟನೆ, ಪಾದಯಾತ್ರೆ, ಫ್ರೀಡಂ ಪಾರ್ಕ್ನಿಲ್ಲಿ ಧರಣಿ ಮಾಡಿದರೂ ಸರ್ಕಾರ ಹಾಗೂ ಆಧಿಕಾರಿಗಳು ಮಾತ್ರ ಜಮೀನು ಮಂಜೂರು ಮಾಡಿಕೊಡಲಿಲ್ಲ, ಬದಲಾಗಿ ಈಗ 10 ಲಕ್ಷಕ್ಕೆ ಲಂಚಕ್ಕೆ ಪೀಡಿಸಿ, 5 ಲಕ್ಷಕ್ಕೆ ಡೀಲ್ ಕುದುರಿಸಿಕೊಂಡಿದ್ದ ಭ್ರಷ್ಟರು ಲೋಕಾ ಬಲೆಗೆ ಬಿದ್ದಿದ್ದಾರೆ.

Join Whatsapp