ಲೋಕಸಭಾ ಚುನಾವಣೆಗೆ ಡೇಟ್ ಫಿಕ್ಸ್ : ಏಪ್ರಿಲ್ 19 ರಂದು ಮೊದಲ ಹಂತದ ಮತದಾನ, ಜೂನ್ 4 ರಂದು ಫಲಿತಾಂಶ

Prasthutha|

►ದೇಶದಲ್ಲಿ 7 ಹಂತಗಳಲ್ಲಿ ಮತದಾನ

- Advertisement -


ದೆಹಲಿ: ದೇಶದ 543 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಘೋಷಿಸಿದ್ದಾರೆ.

ಮತದಾನದ 7 ಹಂತಗಳು, ಕ್ಷೇತ್ರಗಳು

- Advertisement -

ಮೊದಲ ಹಂತ – ಏಪ್ರಿಲ್ 19 – 102 ಕ್ಷೇತ್ರ
ಎರಡನೇ ಹಂತ – ಏಪ್ರಿಲ್ 26 – 89 ಕ್ಷೇತ್ರ
ಮೂರನೇ ಹಂತ – ಮೇ 07 – 94 ಕ್ಷೇತ್ರ
ನಾಲ್ಕನೇ ಹಂತ – ಮೇ 13 – 96 ಕ್ಷೇತ್ರ
ಐದನೇ ಹಂತ – ಮೇ 20 – 49 ಕ್ಷೇತ್ರ
ಆರನೇ ಹಂತ – ಮೇ 25 – 56 ಕ್ಷೇತ್ರ
ಏಳನೇ ಹಂತ – ಜೂನ್ 01 – 57 ಕ್ಷೇತ್ರ

ಕರ್ನಾಟಕದಲ್ಲಿ ಎರಡು ಹಂತದಲ್ಲಿ ಮತದಾನ

ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ದಕ್ಷಿಣ ಕರ್ನಾಟಕದಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದ್ದು, ಉತ್ತರಕರ್ನಾಟಕ ಮೂರನೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ಏಪ್ರಿಲ್ 26 ಮೊದಲ ಹಂತ – ಮೇ 7ರಂದು ಎರಡನೇ ಹಂತದ ಮತದಾನ ನಡೆಯಲಿದೆ.

ಲೋಕಸಭಾ ಚುನಾವಣೆಯ ವಿಶೇಷತೆಗಳು

97 ಕೋಟಿ ಒಟ್ಟು ಮತದಾರರು

ಪುರುಷ ಮತದಾರರು- 49.7 ಕೋಟಿ,

ಮಹಿಳಾ ಮತದಾರರು- 47.1 97 ಕೋಟಿ ಮತ 10

12 ರಾಜ್ಯಗಳಲ್ಲಿ ಮಹಿಳಾ ಮತದಾರರು ಹೆಚ್ಚು, ಹೊಸ ಮತದಾರರಲ್ಲೂ ಮಹಿಳೆಯರು ಹೆಚ್ಚು.

1.8 ಕೋಟಿ ಹೊಸ ಮತದಾರರು.

48 ಸಾವಿರ ತೃತೀಯ ಲಿಂಗಿ

19.74 ಯುವ ಮತದಾರರು

85 ವರ್ಷ ಮೇಲ್ಪಟ್ಟ  82ಲಕ್ಷ ಮತದಾರರು

1.5 ಕೋಟಿ ಚುನಾವಣಾ ಸಿಬ್ಬಂದಿ

10.5 ಲಕ್ಷ ಮತಗಟ್ಟೆಗಳು

55 ಲಕ್ಷ ಇವಿಎಂ ಬಳಕೆ

ಮತಗಟ್ಟೆಯಲ್ಲಿ ವೀಲ್ ಚೇರ್, ಹೆಲ್ಪ್ ಡೆಸ್ಕ್ ವ್ಯವಸ್ಥೆ

100 ವರ್ಷ ಮೇಲ್ಪಟ್ಟ 2.18 ಲಕ್ಷ ಮತದಾರರು.

85 ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ವ್ಯವಸ್ಥೆ

ಅಭ್ಯರ್ಥಿಗಳ ಕ್ರಿಮಿನಲ್ ಕೇಸ್ ಮಾಹಿತಿ ಕಡ್ಡಾಯ

Join Whatsapp