ಲೋಕಸಭಾ ಚುನಾವಣೆ: 24 ಮುಸ್ಲಿಂ ಅಭ್ಯರ್ಥಿಗಳಿಗೆ ಗೆಲುವು

Prasthutha|

ಹೊಸದಿಲ್ಲಿ: ಮಂಗಳವಾರ ಪ್ರಕಟಗೊಂಡ ಲೋಕಸಭಾ ಚುನಾವಣಾ ಫಲಿತಾಂಶಗಳಲ್ಲಿ ಒಟ್ಟು 24 ಮುಸ್ಲಿಂ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.

- Advertisement -


2024 ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ 78 ಮುಸ್ಲಿಂ ಅಭ್ಯರ್ಥಿಗಳಲ್ಲಿ, ಕೇವಲ 24 ಮಂದಿ ಮಾತ್ರ ದೇಶಾದ್ಯಂತ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. 2019 ರಲ್ಲಿ ಕೇವಲ 26 ಮುಸ್ಲಿಂ ಅಭ್ಯರ್ಥಿಗಳು ಮಾತ್ರ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದರು.


ಈ ಬಾರಿ ಸಹರಾನ್ಪುರದ ಕಾಂಗ್ರೆಸ್ ಅಭ್ಯರ್ಥಿ ಇಮ್ರಾನ್ ಮಸೂದ್ 64,542 ಮತಗಳ ಅಂತರದಿಂದ ಗೆದ್ದರೆ, ಕೈರಾನಾದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿ 29 ವರ್ಷದ ಇಕ್ರಾ ಚೌಧರಿ ಬಿಜೆಪಿ ಪ್ರದೀಪ್ ಕುಮಾರ್ ವಿರುದ್ಧ 69,116 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

- Advertisement -


ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಅವರು ಹೈದರಾಬಾದ್ ಕ್ಷೇತ್ರದಲ್ಲಿ ಬಿಜೆಪಿಯ ಮಾಧವಿ ಲತಾ ಅವರನ್ನು 3,38,087 ಮತಗಳ ಅಂತರದಿಂದ ಸೋಲಿಸಿದ್ದಾರೆ. ಲಡಾಖ್ ನ ಲ್ಲಿ ಸ್ವತಂತ್ರ ಅಭ್ಯರ್ಥಿ ಮುಹಮ್ಮದ್ ಹನೀಫಾ ಅವರು ಗೆದ್ದರೆ ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದಿಂದ ಇನ್ನೋರ್ವ ಸ್ವತಂತ್ರ ಅಭ್ಯರ್ಥಿ ಅಬ್ದುಲ್ ರಶೀದ್ ಶೇಖ್ 4.7 ಲಕ್ಷ ಮತ ಪಡೆದು ಗೆದ್ದಿದ್ದಾರೆ.
ಜಮ್ಮು ಕಾಶ್ಮೀರದ ಅನಂತನಾಗ್-ರಜೌರಿ ಕ್ಷೇತ್ರದಲ್ಲಿ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರನ್ನು 2,81,794 ಮತಗಳ ಅಂತರದಿಂದ ನ್ಯಾಷನಲ್ ಕಾನ್ಫರೆನ್ಸ್ ನ ಮಿಯಾನ್ ಅಲ್ತಾಫ್ ಅಹ್ಮದ್ ಸೋಲಿಸಿದ್ದಾರೆ.


ವಿಜಯ ಸಾಧಿಸಿದ ಪ್ರಮುಖರಲ್ಲಿ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ಕೂಡ ಸೇರಿದ್ದಾರೆ. ಟಿಎಂಸಿ ಅಭ್ಯರ್ಥಿಯಾಗಿದ್ದ ಅವರು ಹಿರಿಯ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧುರಿ ಅವರನ್ನು ಪಶ್ಚಿಮ ಬಂಗಾಳದ ಬಹರಾಂಪುರ ಕ್ಷೇತ್ರದಲ್ಲಿ ಸೋಲಿಸಿದ್ದಾರೆ.


ಆಯ್ಕೆಯಾದ ಮುಸ್ಲಿಂ ಅಭ್ಯರ್ಥಿಗಳು:
ಕಾಂಗ್ರೆಸ್:
ಧುಬ್ರಿ : ರಕಿಬುಲ್ ಹುಸೇನ್
ಕಿಶನ್ ಗಂಜ್: ಮುಹಮ್ಮದ್ ಜಾವೇದ್
ಕತಿಹಾರ್ : ತಾರಿಕ್ ಅನ್ವರ್
ವಡಗರ : ಶಾಫಿ ಪರಂಬಿಲ್
ಸಹರಾನ್ಪುರ್ : ಇಮ್ರಾನ್ ಮಸೂದ್
ಮಲ್ದಹಾ (ದಕ್ಷಿಣ) : ಇಶಾ ಖಾನ್ ಚೌಧರಿ
ಲಕ್ಷದ್ವೀಪ : ಮುಹಮ್ಮದ್ ಹಮ್ದುಲ್ಲಾ ಸಯೀದ್


ಸಮಾಜವಾದಿ ಪಕ್ಷ:
ಕೈರಾನಾ : ಇಕ್ರಾ ಚೌಧರಿ
ರಾಂಪುರ : ಮೊಹಿಬುಲ್ಲಾ
ಸಂಭಾಲ್ : ಝಿಯಾ ಉರ್ ರೆಹಮಾನ್
ಗಾಝಿಪುರ : ಅಫ್ಝಲ್ ಅನ್ಸಾರಿ


ತೃಣಮೂಲ ಕಾಂಗ್ರೆಸ್:
ಜಂಗೀಪುರ : ಖಲೀಲೂರ್ ರಹಮಾನ್
ಬಹರಂಪುರ : ಯೂಸುಫ್ ಪಠಾಣ್
ಮುರ್ಷಿದಾಬಾದ್ : ಅಬು ತಾಹರ್ ಖಾನ್
ಬಸಿರ್ಹತ್ : SK ನೂರುಲ್ ಇಸ್ಲಾಂ
ಉಲುಬೇರಿಯಾ : ಸಜ್ದಾ ಅಹಮದ್


ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ :
ಮಲಪ್ಪುರಂ: ಇ.ಟಿ. ಮೊಹಮ್ಮದ್ ಬಶೀರ್
ಪೊನ್ನಾನಿ : ಡಾ. ಎಂ.ಪಿ ಅಬ್ದುಸ್ಸಮದ್ ಸಮದಾನಿ
ರಾಮನಾಥಪುರ : ನವಸ್ಕನಿ ಕೆ


ಆಲ್ ಇಂಡಿಯಾ ಮಜ್ಲಿಸ್ –ಇ-ಇತ್ತೆಹಾದುಲ್ ಮುಸ್ಲಿಮೀನ್:
ಹೈದರಾಬಾದ್ : ಅಸದುದ್ದೀನ್ ಉವೈಸಿ


ಪಕ್ಷೇತರ :
ಬಾರಾಮುಲ್ಲಾ : ಅಬ್ದುಲ್ ರಶೀದ್ ಶೇಖ್
ಲಡಾಖ್ : ಮುಹಮ್ಮದ್ ಹನೀಫಾ


ನ್ಯಾಷನಲ್ ಕಾನ್ಫರೆನ್ಸ್ :
ಶ್ರೀನಗರ : ಅಗಾ ಸೈಯದ್ ರುಹುಲ್ಲಾ ಮೆಹದಿ
ಅನಂತನಾಗ್-ರಾಜೌರಿ : ಮಿಯಾನ್ ಅಲ್ತಾಫ್ ಅಹ್ಮದ್



Join Whatsapp