ಲೋಕ ಸಭಾ ಚುನಾವಣೆ 2024: ಎಕ್ಸಿಟ್ ಪೋಲ್ ರಿಸಲ್ಟ್ ಇಲ್ಲಿದೆ

Prasthutha|

ನವದೆಹಲಿ: ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಲೋಕಸಭೆ ಚುನಾವಣೆ ಅಂತಿಮ ಘಟ್ಟಕ್ಕೆ ತಲುಪಿದೆ. ಇಂದು 7ನೇ ಹಾಗೂ ಕಟ್ಟ ಕಡೆಯ ಹಂತದ ಮತದಾನ ಮುಗಿದಿದೆ. ಘಟಾನುಘಟಿಗಳ ಭವಿಷ್ಯ ನಿರ್ಧಾರವಾಗಲಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 2014, 2019ರ ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿ ಎರಡು ಬಾರಿ ಅಧಿಕಾರ ನಡೆಸಿದೆ. ಈ ಬಾರಿ 400ಕ್ಕೂ ಅಧಿಕ ಕೇತ್ರಗಳಲ್ಲಿ ಗೆಲ್ಲುವ ಮೂಲಕ 3ನೇ ಅವಧಿಗೆ ಸರ್ಕಾರ ರಚನೆ ಮಾಡುತ್ತೇವೆ ಎಂಬ ವಿಶ್ವಾಸದಲ್ಲಿದೆ.

- Advertisement -

ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವನ್ನು ಎದುರಿಸಲು ಕಾಂಗ್ರೆಸ್ ನೇತೃತ್ವದಲ್ಲಿ 26 ಪಕ್ಷಗಳನ್ನು ಸೇರಿಸಿಕೊಂಡು ‘ಇಂಡಿಯಾ’ ಮೈತ್ರಿಕೂಟ ರಚಿಸಲಾಗಿದೆ. ಕಾಂಗ್ರೆಸ್ ಸೀಟು ಹಂಚಿಕೆ ಮಾಡಿಕೊಂಡು ವಿವಿಧ ಪಕ್ಷಗಳ ಜೊತೆ ಚುನಾವಣೆ ಎದುರಿಸಿದ್ದು, ನಾವೇ ಅಧಿಕಾರಕ್ಕೇರುತ್ತೇವೆ ಎನ್ನುತ್ತಿದೆ. ಇದೀಗ‌ ಕೆಲವು ಎಕ್ಸಿಟ್ ಪೋಲ್ ಫಲಿತಾಂಶ ಹೊರ ಬಿದ್ದಿದೆ.

ಕರ್ನಾಟಕದಲ್ಲಿ ಬಿಜೆಪಿಗೆ ಮುನ್ನಡೆ

- Advertisement -

ಇಂಡಿಯಾ ಟಿವಿ

ಬಿಜೆಪಿ: 18-22

ಜೆಡಿಎಸ್: 1-3

ಕಾಂಗ್ರೆಸ್: 4-8

ಪೋಲ್ ಸ್ಟ್ರ್ಯಾಟ್

ಬಿಜೆಪಿ: 18

ಜೆಡಿಎಸ್: 2

ಕಾಂಗ್ರೆಸ್: 8

ಇಂಡಿಯಾ ಟುಡೇ

ಬಿಜೆಪಿ: 20-22

ಜೆಡಿಎಸ್: 2-3

ಕಾಂಗ್ರೆಸ್: 3-5

ಪೋಲ್ ಹಬ್

ಬಿಜೆಪಿ: 21-24

ಜೆಡಿಎಸ್: 1-2

ಕಾಂಗ್ರೆಸ್: 3-7

ಪ್ರಜ್ವಲ್ ರೇವಣ್ಣ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಇಂಡಿಯಾ ಟುಡೆ- ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ತಿಳಿಸಿದೆ.

ಇಂಡಿಯಾ ಟಿವಿ-ಸಿಎನ್‌ಎಕ್ಸ್ ಎಕ್ಸಿಟ್ ಪೋಲ್ ಫಲಿತಾಂಶಗಳ ಪ್ರಕಾರ ದಕ್ಷಿಣ ಭಾರತದಲ್ಲಿ ಬಿಜೆಪಿ ಭರ್ಜರಿ ಗೆಲುವಿನ ನಿರೀಕ್ಷೆ ಇದೆ. ಕೇರಳ, ತಮಿಳುನಾಡಿನಲ್ಲಿಯೂ ಈ ಬಾರಿ ಬಿಜೆಪಿ ಖಾತೆ ತೆರೆಯಲಿದೆ.

ಮಹಾರಾಷ್ಟ್ರದಲ್ಲಿ ಏಕನಾಥ್‌ ಶಿಂಧೆ ನೇತೃತ್ವದ ಮಹಾಯುತಿ ಒಕ್ಕೂಟವು ಸುಮಾರು 22-26 ಸ್ಥಾನಗಳನ್ನು ಗೆಲ್ಲಬಹುದು. ಕಾಂಗ್ರೆಸ್‌, ಶಿವ ಸೇನೆ, ಎನ್‌ಸಿಪಿ ಒಳಗೊಂಡ ಮಹಾ ವಿಕಾಶ್‌ ಅಘಡಿಗೆ 22-24 ಸ್ಥಾನಗಳು ದೊರಕಬಹುದು ಎಂದು ಎಬಿಪಿ ಸಿ ವೋಟರ್‌ ಸಮೀಕ್ಷೆ ಅಂದಾಜಿಸಿದೆ.

ಭಾರತದಲ್ಲಿ ಎನ್‌ಡಿಎ ಮುನ್ನಡೆ

ಪಿ ಮಾರ್ಕ್

ಎನ್‌ಡಿಎ: 359

ಇಂಡಿಯಾ: 154

ಇತರ: 30

ಮಾಟ್ರೈಝ್

ಎನ್‌ಡಿಎ: 352-368

ಇಂಡಿಯಾ: 118-133

ಇತರೆ: 43-48

ಜನ್ ಕೀ ಬಾತ್

ಎನ್‌ಡಿಎ: 377

ಇಂಡಿಯಾ: 151

ಇತರೆ: 15

ನ್ಯೂಸ್ ಡಿ ಡೈನಾಮಿಕ್ಸ್ – ಎನ್‌ಡಿಎಗೆ ಸ್ಪಷ್ಟ ಬಹುಮತ

ನ್ಯೂಸ್ ಡಿ ಡೈನಾಮಿಕ್ಸ್ ಮತಗಟ್ಟೆ ಸಮೀಕ್ಷೆ ಪ್ರಕಾರ ಬಿಜೆಪಿ 371 ಸ್ಥಾನಗಳಲ್ಲಿ ಗೆಲುವು ಗಳಿಸಿದ್ದು, ಮತ್ತೆ ಅಧಿಕಾರಕ್ಕೆ ಬರಲಿದೆ. ಇಂಡಿಯಾ ಮೈತ್ರಿಕೂಟ ಕೇವಲ 125 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದು ವರದಿ ಹೇಳಿದೆ.

ಇಂಡಿಯಾಟುಡೇ-ಆಯಕ್ಸಿಸ್ ಪ್ರಕಾರ ಇಂಡಿಯಾ ಮೈತ್ರಿಕೂಟ ತಮಿಳುನಾಡಿನಲ್ಲಿ 33ರಿಂದ 37 ಮತ್ತು ಎನ್‌ಡಿಎ 2ರಿಂದ 4 ಸ್ಥಾನಗಳಲ್ಲಿ ಗೆಲ್ಲಲಿದೆ.

ಟಿವಿ9 ಪೋಲ್​ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಪ್ರಕಾರ 543 ಲೋಕಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 305 ಸ್ಥಾನ ಗಳಿಸಲಿದೆ. ಎನ್​ಡಿಎ ಮೈತ್ರಿಕೂಟಕ್ಕೆ ಒಟ್ಟು 340 ಸ್ಥಾನ ದೊರೆಯಲಿವೆ. ಮತ್ತೊಂದೆಡೆ, ಕಾಂಗ್ರೆಸ್​ ಈ ಬಾರಿ ತುಸು ಬಲ ವೃದ್ಧಿಸಿಕೊಂಡಿದೆ. ಪಕ್ಷಕ್ಕೆ 65 ಸ್ಥಾನ ದೊರೆಯಲಿದ್ದು, ‘ಇಂಡಿಯಾ’ ಮೈತ್ರಿಕೂಟಕ್ಕೆ 167 ಸ್ಥಾನ ದೊರೆಯಲಿದೆ. ಇತರರು 36 ಸ್ಥಾನ ಗಳಿಸಲಿದ್ದಾರೆ.

ಐದು ರಾಜ್ಯಗಳಲ್ಲಿ ಬಿಜೆಪಿ ಕ್ಲೀನ್​ಸ್ವೀಪ್

ಟಿವಿ9 ಪೋಲ್​ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಪ್ರಕಾರ ಗುಜರಾತ್, ಮಧ್ಯ ಪ್ರದೇಶ, ಛತ್ತೀಸ್​ಗಢ, ಉತ್ತರಾಖಂಡ ಹಾಗೂ ದೆಹಲಿಗಳಲ್ಲಿ ಬಿಜೆಪಿ ಕ್ಲೀನ್​ಸ್ವೀಪ್ ಸಾಧನೆ ಮಾಡಿದೆ.

ಆದರೆ ಇವೆಲ್ಲ ಎಷ್ಟು ನಿಜವಾಗಲಿದೆ ಎಂಬುದನ್ನು ತಿಳಿಯಬೇಕಾದರೆ ಜೂನ್ 4ರವರೆಗೆ ಕಾಯಬೇಕಿದೆ.



Join Whatsapp