ಕೊರೋನಾ ಹೆಚ್ಚಳ: ಚೀನಾದಲ್ಲಿ ಮತ್ತೆ ಲಾಕ್’ಡೌನ್

Prasthutha|

ಬೀಜಿಂಗ್: ಚೀನಾದಲ್ಲಿ ಕಳೆದ ಒಂದು ವಾರದಿಂದಲೂ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇಂದು(ಸೋಮವಾರ) ರಾತ್ರಿಯಿಂದಲೇ ಲಾಕ್‍’ಡೌನ್ ಘೋಷಿಸಿದೆ. ಉದ್ದೇಶಿತ ಲಾಕ್‍ ಡೌನ್ ಹಾಗೂ ಪ್ರಯಾಣ ನಿರ್ಬಂಧಗಳನ್ನು ಬಳಸಿ ಚೀನಾ ಲಾಕ್‍ ಡೌನ್ ಘೋಷಿಸಿದೆ.

- Advertisement -

ಇತ್ತೀಚಿನ ದಿನಗಳಲ್ಲಿ ಕೊರೋನಾ ರೂಪಾಂತರಿಯಾದ ಓಮಿಕ್ರಾನ್ ಚೀನಾದ ಅನೇಕ ನಗರಗಳಲ್ಲಿ ತನ್ನ ಹಿಡಿತ ಸಾಧಿಸಿದೆ. ಹಾಗಾಗಿ, ಈಶಾನ್ಯ ಭಾಗದ 2ನೇ ಅತಿದೊಡ್ಡ ನಗರವಾದ ಜಿಲಿನ್ ನಲ್ಲಿ ಸೋಮವಾರ ರಾತ್ರಿಯಿಂದಲೇ ಮೂರು ದಿನಗಳ ವರೆಗೆ ಲಾಕ್‍ ಡೌನ್ ಘೋಷಿಸಿದೆ. ಈ ಪ್ರಾಂತ್ಯದಲ್ಲಿ 4.5 ಮಿಲಿಯನ್‍ ನಷ್ಟು ಜನಸಂಖ್ಯೆ ಇರುವುದಾಗಿ ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. 

ಭಾನುವಾರ ಚೀನಾದಲ್ಲಿ 4 ಸಾವಿರಕ್ಕೂ ಅಧಿಕ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದೆ.



Join Whatsapp