ಹಾಸನ: ಸೋಮವಾರ ರಾತ್ರಿ ಮೂರು ಗಂಟೆಗಳ ಕಾಲ ನಿರಂತರ ಸುರಿದ ಭಾರೀ ಮಳೆ ಅಪಾರ ಅವಾಂತರ ಸೃಷ್ಟಿಸಿದ್ದು, ಅನೇಕ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ಅನೇಕ ವಸ್ತುಗಳು ನೀರು ಪಾಲಾಗಿವೆ. ಈ ಹಿನ್ನೆಲೆ ಸ್ಥಳ ಪರಿಶೀಲನೆಗೆ ಬಂದ ಶಾಸಕ ಕೆ.ಎಂ.ಶಿವಲಿಂಗೇಗೌಡ ಎದುರು ಜನರು ಆಕ್ರೋಶ ಹೊರಹಾಕಿದರು.
ಮಳೆ ನೀರು ನುಗ್ಗಿ ಇಡೀ ರಾತ್ರಿ ಮನೆಯಿಂದ ಹೊರ ಬಂದು ಕಾಲ ಕಳೆದಿದ್ದೇವೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ಹಾಳಾಗಿವೆ.ಕಾಲುವೆ ದುರಸ್ತಿ ಮಾಡುವಂತೆ ಮನವಿ ಮಾಡಿದರೂ ಯಾರೂ ಇತ್ತ ಗಮನಹರಿಸಿಲ್ಲ ಎಂದು ದೂರಿದರು.
ನಮ್ಮ ಕಷ್ಟ ಆಲಿಸಲು ಅಧಿಕಾರಿಗಳು ಬಂದಿಲ್ಲ ಎಂದು ಸಿಟ್ಟು ಹೊರ ಹಾಕಿದರು. ಈ ವೇಳೆ ಅಧಿಕಾರಿಗಳಿಗೆ ಫೋನ್ ಮಾಡಿದ ಶಾಸಕರು, ತೀವ್ರ ತರಾಟೆಗೆ ತೆಗೆದುಕೊಂಡರು.
ಕೂಡಲೇ ತಹಸೀಲ್ದಾರ್ ವಿದ್ಯಾ ವಿಭಾ ರಾಥೋಡ್, ನಗರಸಭೆ ಆಯುಕ್ತ ಬಸವರಾಜು ಶಿಗ್ಗಾವಿ, ಆರ್‌ಐ ಶಿವನಂದ ನಾಯ್ಕ್ ಸ್ಥಳಕ್ಕೆ ಓಡಿಬಂದರು.
ಈ ವೇಳೆ ಅಧಿಕಾರಿಗಳ ವಿರುದ್ಧ ಗರಂ ಆದ ಕೆಎಂಶಿ, ದನಕಾಯಲು ಹೋಗಿ ಎಂದು ಹರಿಹಾಯ್ದರು. ಈ ವೇಳೆ ಶಾಸಕರು-ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆಯಿತು.