ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ: ಕಾಂಗ್ರೆಸ್ ಮೇಲುಗೈ, ಬಿಜೆಪಿಗೆ ಮುಖಭಂಗ

Prasthutha|

ಸೋಮವಾರ 19 ಜಿಲ್ಲೆಗಳಲ್ಲಿ ನಡೆದ 58 ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಿದೆ. ಹಾಗೆಯೇ ವಿವಿಧ ನಗರ ಸಂಸ್ಥೆಗಳ 9 ವಾರ್ಡ್ ಗಳ ಉಪಚುನಾವಣೆ ಹಾಗೂ 57 ಗ್ರಾಮ ಪಂಚಾಯಿತಿಗಳ ಚುನಾವಣೆಯ ಫಲಿತಾಂಶ ಕೂಡ ಇಂದು ಹೊರಬಿದ್ದಿದೆ. ಆಯಾ ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಿದ್ದು, ಎಣಿಕೆ ಮುಗಿದು ಅಂತಿಮ ಫಲಿತಾಂಶ ಹೊರಬಿದ್ದಿದೆ. ಪುರಸಭೆ ಮತ್ತು  ಪಟ್ಟಣ ಪಂಚಾಯತ್ ನಲ್ಲಿ  ಕಾಂಗ್ರೆಸ್ ಕೈ ಎತ್ತಿದರೆ, ನಗರಸಭೆಯಲ್ಲಿ ಕಮಲ ಅರಳಿದೆ.  ಪುರಸಭೆ ಚುನಾವಣೆಯಲ್ಲಿ ಒಟ್ಟು 441 ಸ್ಥಾನಗಳಲ್ಲಿ ಕಾಂಗ್ರೆಸ್ 201 ಸ್ಥಾನಗಳನ್ನು ತೆಕ್ಕೆಗೆ ಹಾಕಿಕೊಂಡಿದೆ. ಬಿಜೆಪಿ 176 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ. ಜೆಡಿಎಸ್ 21 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪಕ್ಷೇತರರು 43 ಸ್ಥಾನಗಳಿಗೆ ಜಯ ಕಂಡಿದ್ದಾರೆ.

- Advertisement -

ಪಟ್ಟಣ ಪಂವಾಯತ್  ಚುನಾವಣೆಯಲ್ಲಿಯೂ ಕಾಂಗ್ರೆಸ್ ಮೇಲುಗೈ ಸಾಧಿಸಿದೆ. ಒಟ್ಟು 557 ಸ್ಥಾನಗಳಲ್ಲಿ ಕಾಂಗ್ರೆಸ್ 236 ಸ್ಥಾನಗಳಲ್ಲಿ ಗೆದ್ದು ಬೀಗಿದೆ. ಬಿಜೆಪಿ 194 ಸ್ಥಾನಗಳಲ್ಲಿ ವಿಜಯದ ನಗು ನಕ್ಕರೆ ಪಕ್ಷೇತರರು 135 ಸ್ಥಾನಗಲ್ಲಿ ಗೆಲುವು ಸಾಧಿಸಿದ್ದಾರೆ. ಜೆಡಿಎಸ್ ಕೇವಲ 12 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿದೆ.

ಇನ್ನು ನಗರಸಭೆ ಚುನಾವಣೆಯಲ್ಲಿ ಹೆಚ್ಚಿನ ಕಡೆ ಗೆಲವಿನ ನಗೆ ಬೀರಿದ್ದು ಮಾತ್ರ  ಬಿಜೆಪಿಯಾಗಿದೆ. ಒಟ್ಟು 166 ಸ್ಥಾನಗಳಲ್ಲಿ ಬಿಜೆಪಿ 67 ಸ್ಥಾನಗಳಲ್ಲಿ ಕಮಲ ಅರಳಿಸಿದೆ. ಕಾಂಗ್ರೆಸ್  61ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.  ಪಕ್ಷೇತರರಿಗೆ 26 ಸ್ಥಾನಗಳು ಸಿಕ್ಕರೆ, ಜೆಡಿಎಸ್ 12 ಸ್ಥಾನಗಳನ್ನು ಪಡೆದುಕೊಂಡಿದೆ.

- Advertisement -

ಒಟ್ಟಾರೆಯಾಗಿ ಇಂದು ಕಾಂಗ್ರೆಸ್  504 ಸ್ಥಾನಗಳಲ್ಲಿ ವಿಜಯದ ನಗೆ ನಕ್ಕು ಅತಿ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷವಾಗಿದೆ. ಬಿಜೆಪಿ ನಂತರದ ಸ್ಥಾನ ಪಡೆದಿದ್ದು 439 ಸ್ಥಾನ ಪಡೆದಿದೆ. ಜೆಡಿಎಸ್ 45 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಪಕ್ಷೇತರರು 196 ಕಡೆಯಲ್ಲಿ ವಿಜಯಿಯಾಗಿದ್ದಾರೆ. ಎಸ್ಡಿಪಿಐ 39 ಸ್ಥಾನಗಳಲ್ಲಿ ಸ್ಫರ್ಧಿಸಿ 9 ಸ್ಥಾನಗಳನ್ನು ಪಡೆದುಕೊಂಡಿದೆ. ಆಮ್ ಆದ್ಮಿ 1 ಸ್ಥಾನವನ್ನು ಗಳಿಸಿದೆ.

Join Whatsapp