ಸಾಹಿತಿ ಡಾ. ಸಾರಾ ಅಬೂಬಕರ್ ನಿಧನ: SDPI ಸಂತಾಪ

Prasthutha|

ಬೆಂಗಳೂರು: ನಾಡೋಜ ಡಾ. ಸಾರಾ ಅಬೂಬಕರ್ ನಿಧನಕ್ಕೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ತೀವ್ರ ಸಂತಾಪ ವ್ಯಕ್ತಪಡಿಸಿದೆ.

- Advertisement -


ಈ ಕುರಿತು ಪ್ರತಿಕ್ರಿಯಿಸಿದ SDPI ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು, ಕನ್ನಡದ ಖ್ಯಾತ ಸಾಹಿತಿ ನಾಡೋಜ ಡಾ. ಸಾರಾ ಅಬೂಬಕರ್ ಅವರು ಇಂದು ನಮ್ಮನ್ನು ಅಗಲಿದ್ದಾರೆ. 86 ವರ್ಷ ಪ್ರಾಯದ ಸಾರಾ. ಅಬೂಬಕರ್ ಅವರು 10 ಕಾದಂಬರಿ, 6 ಕಥಾಸಂಕಲನ, ಪ್ರವಾಸ ಕಥನ ಪ್ರಕಟಿಸಿದ್ದರು. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಅಪಾರ ಕೊಡುಗೆಯನ್ನು ನೆನಪಿಸುತ್ತಾ ಅವರ ಅಗಲುವಿಕೆಗೆ ಸಂತಾಪವನ್ನು ಸೂಚಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

Join Whatsapp