ಸೌದಿ ಅರೇಬಿಯಾದಲ್ಲಿ ಲಘು ವಿಮಾನ ಪತನ: ಅಸುನೀಗಿದ ಪೈಲಟ್

Prasthutha|

ರಿಯಾದ್: ಸೌರಿ ಅರೇಬಿಯಾದಲ್ಲಿ ಲಘು ವಿಮಾನವೊಂದು ಪತನಗೊಂಡಿದ್ದು, ಘಟನೆಯಲ್ಲಿ ಪೈಲಟ್ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

- Advertisement -

ರಿಯಾದ್’ನ ಅಲ್ ಥುಮಾಮಾ ವಿಮಾನ ನಿಲ್ದಾಣದಿಂದ ಹೊರಟ ಲಘು ವಿಮಾನವೊಂದು ಇಂದು ಬೆಳಗ್ಗೆ ಪತನಗೊಂಡಿದೆ ಎಂದು ವಾಯುಯಾನ ಸಂಸ್ಥೆ ತಿಳಿಸಿದೆ. ಈ ವಿಮಾನದಲ್ಲಿ ಪೈಲಟ್ ಮಾತ್ರ ಇದ್ದರು ಎಂದು ತಿಳಿದು ಬಂದಿದೆ.

ಈ ಅಪಘಾತಕ್ಕೆ ನಿಖರ ಕಾರಣಗಳ ಕುರಿತು ತನಿಖೆ ನಡೆಸಲು ತಂಡವನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



Join Whatsapp