ಪತ್ನಿಯನ್ನು ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ

Prasthutha|

ಧಾರವಾಡ: ಪತ್ನಿ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಧಾರವಾಡದ ಮೂರನೇ ಅಧಿಕ ಜಿಲ್ಲಾ ನ್ಯಾಯಾಲಯದಿಂದ ತೀರ್ಪು ನೀಡಿದೆ.

- Advertisement -

 ಗಣೇಶ ಬಳ್ಳಾರಿ ಶಿಕ್ಷೆಗೊಳಗಾದ ಅಪರಾಧಿ. ಗಣೇಶ, ಧಾರವಾಡದ ರಾಜೀವ ಗಾಂಧಿ ನಗರ ನಿವಾಸಿಯಾಗಿದ್ದು, 2021ರ ಆಗಸ್ಟ್ 11 ರಂದು ಪತ್ನಿ ಶಿಲ್ಪಾ ಬಳ್ಳಾರಿಯನ್ನು ಕೊಲೆಗೈಯ್ದಿದ್ದ.

 ಅನ್ಯ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಗಣೇಶನನ್ನು ಪ್ರಶ್ನಿಸಿದ್ದ ಪತ್ನಿ ಶಿಲ್ಪಾ ವಿರುದ್ಧ ಗಣೇಶ ಸಿಟ್ಟಿಗೆದ್ದಿದ್ದ. ಅನ್ಯ ಮಹಿಳೆಯೊಂದಿಗೆ ಇದ್ದಾಗಲೇ ಸಿಕ್ಕಿ ಬಿದ್ದಿದ್ದ ಗಣೇಶ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ತಾನು ಹೊಸದಾಗಿ ಕಟ್ಟಿಸುತ್ತಿದ್ದ‌ ಮನೆಯಲ್ಲಿ ಪತ್ನಿಯನ್ನು ಸಲಿಕೆಯಿಂದ ಹೊಡೆದು ಕೊಂದಿದ್ದ.

- Advertisement -

ಈ‌ ಬಗ್ಗೆ ಧಾರವಾಡ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ‌ ವಿಚಾರಣೆ ನಡೆಸಿ‌ದ ನ್ಯಾಯಾಲಯ ಇಂದು ತೀರ್ಪು ನೀಡಿದೆ. ಸರ್ಕಾರದ ಪರ ಪ್ರಶಾಂತ ತೊರಗಲ್ ವಾದ ಮಂಡಿಸಿದ್ದರು.

Join Whatsapp