ಅಪ್ಪ ಮಗನ ವಿರುದ್ಧ 700 ಮಹಿಳೆಯರಿಂದ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ:

Prasthutha|

ರೇವಣ್ಣರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಆಗ್ರಹ

- Advertisement -

ಬೆಂಗಳೂರು; ಪ್ರಜ್ವಲ್‌ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 700ಜನ ಮಹಿಳೆಯರಿಂದ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ರವಾನೆಯಾಗಿದೆ ಎಂದು ತಿಳಿದು ಬಂದಿದೆ. ವಿವಿಧ ಮಹಿಳಾ ಒಕ್ಕೂಟ, ಸಂಘಟನೆಗಳ 700 ಮಹಿಳೆಯರು ಪತ್ರ ಬರೆದು, ಹೆಚ್ ಡಿ. ರೇವಣ್ಣರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಆಗ್ರಹ ಮಾಡಿದ್ದಾರೆ.

ಅಖಿಲ ಭಾರತ ಸ್ತ್ರೀ ವಾದಿ ಒಕ್ಕೂಟ, ವುಮೆನ್ ಓಅರ್ ಡೆಮಾಕ್ರಸಿ ಸೇರಿ ಹಲವು ಸಂಘಟನೆಗಳು ಒಗ್ಗೂಡಿ ಪತ್ರ ಬರೆದಿದೆ. ಕೂಡಲೇ ಪ್ರಜ್ವಲ್ ರೇವಣ್ಣ ಹಾಗೂ ಹೆಚ್ ಡಿ ರೇವಣ್ಣ ವಿರುದ್ಧ ಕ್ರಮಕ್ಕೆ ಮನವಿ ಮಾಡಿದೆ. ಸಂತ್ರಸ್ಥೆಯರಿಗೆ ರಕ್ಷಣೆ, ಕಾನೂನು ನೆರವು ಕೊಡಬೇಕು ಎಂದು ಮನವಿ ಮಾಡಿ 700 ಜನ ಮಹಿಳೆಯರು ಸಹಿ ಹಾಕಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

- Advertisement -

ಪ್ರಸ್ತುತ ರೇವಣ್ಣರನ್ನು ಸಿಟ್ ಅಧಿಕಾರಿಗಳು ಬಂಧಿಸಿದ್ದು, ಬೆಂಗಳೂರಿಗೆ ಕರೆ ತಂದಿದ್ದಾರೆ.



Join Whatsapp