ಮನೆಯಲ್ಲಿ ಕಾಟ ಕೊಡುವ ನೊಣ: ಪರಿಹಾರ ಸುಲಭ

Prasthutha|

ಮನೆಯಲ್ಲಿ ಲಭ್ಯವಿರುವ ನೈಸರ್ಗಿಕ ಉತ್ಪನ್ನಗಳೊಂದಿಗೆ ನೊಣಗಳು ಮತ್ತು ಸೊಳ್ಳೆಗಳನ್ನು ಹೇಗೆ ಸುಲಭವಾಗಿ ತೊಡೆದು ಹಾಕಬಹುದು ಎಂಬುದನ್ನು ತಿಳಿದುಕೊಳ್ಳೋಣ.

- Advertisement -

ಉಪ್ಪು ನೀರು: ಸ್ಪ್ರೇ ಬಾಟಲಿಯನ್ನ ನೀರಿನಿಂದ ತುಂಬಿಸಿ ಮತ್ತು ಎರಡು ಚಮಚ ಉಪ್ಪು ಸೇರಿಸಿ. ನೊಣಗಳು ಇರುವಲ್ಲಿ ಈ ದ್ರವವನ್ನ ಸಿಂಪಡಿಸಿ. ನೆಲ ಸ್ವಚ್ಛಗೊಳಿಸುವಾಗ ಉಪ್ಪು ನೀರಿನಿಂದ ನೆಲವನ್ನ ಒರೆಸುವುದು ಉತ್ತಮ ಫಲಿತಾಂಶವನ್ನ ನೀಡುತ್ತದೆ.

ಬಿರಿಯಾನಿ ಎಲೆ: ಮನೆಯಲ್ಲಿ ನೊಣಗಳು ಜಾಸ್ತಿ ಇದ್ದಾಗ ಎರಡು ಬಿರಿಯಾನಿ ಎಲೆಗಳನ್ನ ಸುಟ್ಟು ಹಾಕಿ. ಈ ಎಲೆಗಳ ಹೊಗೆಯಿಂದ ನೊಣಗಳೂ ಓಡಿಹೋಗುತ್ತವೆ.

- Advertisement -

ಕರ್ಪೂರದ ಪುಡಿ: ಕರ್ಪೂರದ ಉಂಡೆಗಳನ್ನ ತೆಗೆದುಕೊಂಡು ನುಣ್ಣಗೆ ರುಬ್ಬಿಕೊಳ್ಳಿ. ಈ ಪುಡಿಯನ್ನ ನೀರಿನೊಂದಿಗೆ ಬೆರೆಸಿ ಸ್ಪ್ರೇ ಬಾಟಲಿಯಲ್ಲಿ ತುಂಬಿಸಬೇಕು. ನೊಣಗಳು ಕಂಡುಬಂದಲ್ಲಿ ಸಿಂಪಡಿಸಿ. ಹೀಗೆ ಮಾಡಿದರೆ ಒಂದೇ ಒಂದು ನೊಣವೂ ಕಾಣಿಸುವುದಿಲ್ಲ.

ತುಳಸಿ ಎಲೆಯ ಪೇಸ್ಟ್ : ಸ್ವಲ್ಪ ತುಳಸಿ ಎಲೆಗಳನ್ನ ತೆಗೆದುಕೊಂಡು ಚೆನ್ನಾಗಿ ಪೇಸ್ಟ್ ಮಾಡಿ. ಈ ಪೇಸ್ಟ್ ನೀರಿನೊಂದಿಗೆ ಮಿಶ್ರಣ ಮಾಡಿ. ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ. ಮನೆಯಲ್ಲಿ ನೊಣಗಳು ಹೆಚ್ಚಾಗಿ ಕಂಡುಬರುವ ಸ್ಥಳಗಳಲ್ಲಿ ದಿನಕ್ಕೆ ಎರಡು ಬಾರಿ ಸಿಂಪಡಿಸಿ. ಹೀಗೆ ಮಾಡಿದರೆ ನೊಣಗಳು ಬರುವುದಿಲ್ಲ.

ದಾಲ್ಚಿನ್ನಿ ಪುಡಿ: ದಾಲ್ಚಿನ್ನಿ ನೊಣಗಳನ್ನ ಹಿಮ್ಮೆಟ್ಟಿಸಲು ತುಂಬಾ ಉಪಯುಕ್ತವಾಗಿದೆ. ಮೊದಲು ಕೆಲವು ದಾಲ್ಚಿನ್ನಿ ತುಂಡುಗಳನ್ನು ತೆಗೆದುಕೊಂಡು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ನೊಣಗಳು ಹೆಚ್ಚಾಗಿ ಕಂಡುಬರುವ ಸ್ಥಳಗಳಲ್ಲಿ ಈ ಪುಡಿಯನ್ನ ಸ್ವಲ್ಪ ಸಿಂಪಡಿಸಿ.

ವಿನೆಗರ್ : ಒಂದು ಬಟ್ಟಲಿನಲ್ಲಿ ಆಪಲ್ ಸೈಡರ್ ವಿನೆಗರ್ ತೆಗೆದುಕೊಂಡು ಅದರಲ್ಲಿ ಸ್ವಲ್ಪ ನೀಲಗಿರಿ ಎಣ್ಣೆಯನ್ನ ಸೇರಿಸಿ. ನಂತರ ಈ ದ್ರವವನ್ನ ಸ್ಪ್ರೇ ಬಾಟಲಿಯಲ್ಲಿ ತುಂಬಿಸಿ ಮತ್ತು ನೊಣಗಳು ಹೆಚ್ಚಾಗಿ ಇರುವಲ್ಲಿ ಸಿಂಪಡಿಸಿ. ನೊಣಗಳನ್ನ ದೂರವಿಡಲು ದಿನಕ್ಕೆ ಎರಡು ಬಾರಿ ಸಿಂಪಡಿಸಿ.

Join Whatsapp