ಮಂಗಳೂರು ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆ ಪ್ರತ್ಯಕ್ಷ: ಕಾರ್ಯಾಚರಣೆಗಿಳಿದ ಅರಣ್ಯ ಇಲಾಖೆ

Prasthutha|

- Advertisement -

ಮಂಗಳೂರು: ಬಜ್ಪೆಯ ಕೆಂಜಾರಿನಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆಯೊಂದು ಪತ್ತೆಯಾದ ಘಟನೆ ನಡೆದಿದೆ.

ಈ ಚಿರತೆಯನ್ನು ಖುದ್ದು ವಿಮಾನ‌ ನಿಲ್ದಾಣದ ಅಧಿಕಾರಿಯೇ ನೋಡಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

- Advertisement -

ವಿಮಾನ‌ ನಿಲ್ದಾಣದ ಅಧಿಕಾರಿಯೊಬ್ಬರು ಬೆಳ್ಳಂಬೆಳಗ್ಗೆ ವೇಳೆ ಕಾರಿನಲ್ಲಿ ಡ್ಯುಟಿಗೆ ಬರುತ್ತಿದ್ದರು‌. ಈ ವೇಳೆ ಕಾರಿನ ಮುಂಭಾಗವಾಗಿ ಚಿರತೆಯೊಂದು ರಸ್ತೆ ದಾಟಿದೆ. ತಕ್ಷಣ ಅಧಿಕಾರಿ ತಮ್ಮ ಮೊಬೈಲ್‌ನಿಂದ ಚಿರತೆಯ ಫೋಟೊ ಕ್ಲಿಕ್ಕಿಸಿ, ಬಳಿಕ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳು ವಿಮಾನ ನಿಲ್ದಾಣ ಪರಿಸರದಲ್ಲಿ ಚಿರತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ



Join Whatsapp