ಕೋಣೆಯೊಳಗೆ ನುಗ್ಗಿದ ಚಿರತೆ: ಬೆಚ್ಚಿಬಿದ್ದ ಮನೆಯವರು

Prasthutha|

ಮುಂಬೈ: ಚಿರತೆಯೊಂದು ಮನೆಯೊಳಗೆ ನುಗ್ಗಿರುವ ಘಟನೆ ಮಹಾರಾಷ್ಟ್ರದ ಸತಾರಾದಲ್ಲಿ ನಡೆದಿದೆ. ಚಿರತೆ ಕಂಡು ಮನೆಯವರು ಬೆಚ್ಚಿಬಿದ್ದಿದ್ದಾರೆ.

- Advertisement -


ಕುಟುಂಬವೊಂದು ದುರ್ಗಾ ಮೂರ್ತಿ ವಿಸರ್ಜನೆ ತೆರಳಿದ ಸಂದರ್ಭದಲ್ಲಿ ಚಿರತೆ ಮನೆಯೊಳಗೆ ನುಗ್ಗಿದೆ. ಬಳಿಕ ಮನೆಗೆ ತೆರಳಿದಾಗ ಚಿರತೆ ಕೋಣೆಯೊಂದರಲ್ಲಿ ಅವಿತು ಕೂತಿತ್ತು.

- Advertisement -

ಬಳಿಕ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ ಮನೆಯವರು ಚಿರತೆಯನ್ನು ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.



Join Whatsapp