ಯಲಹಂಕ ಬಳಿ ಕರು ತಿಂದ ಚಿರತೆ: ಬೆಂಗಳೂರಿಗರಲ್ಲಿ ಹೆಚ್ಚಿದ ಆತಂಕ

Prasthutha|

ಬೆಂಗಳೂರು: ನಗರದಲ್ಲಿ ಕಳೆದು ನಾಲ್ಕೈದು ತಿಂಗಳಿಂದ ನಗರದ ಒಂದಲ್ಲ, ಒಂದು ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.

- Advertisement -


ಜ್ಞಾನಭಾರತಿ, ಯಶವಂತಪುರ, ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದ್ದು, ಯಲಹಂಕದ ದಾಸನಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ ಫೆ.19 ರಂದು ರಾತ್ರಿ ಚಿರತೆ ಕರುವೊಂದನ್ನು ತಿಂದು ಹಾಕಿದೆ.


ಐದು ದಿನಗಳ ಹಿಂದಷ್ಟೇ ಇದೇ ಊರಿನ ಪಕ್ಕದ ರಾಮಾಂಜನೇಯ ಲೇಔಟ್’ನಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದವು. ಇದಾದ ನಂತರ ಈಗ ಚಿರತೆ ಕರು ಒಂದನ್ನು ಅರ್ಧ ತಿಂದಿದೆ. ಇದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದ್ದು, ಹೊರಗಡೆ ಓಡಾಡಲು ಭಯ ಪಡುತ್ತಿದ್ದಾರೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಇಟ್ಟಿದ್ದು, ಬೋನ್ ಒಳಗೆ ಮೇಕೆ ಮರಿ ಇಟ್ಟು ವ್ಯವಸ್ಥೆ ಮಾಡಿದೆ.

- Advertisement -


ನಾಯಿ ಕೊಂದ ಚಿರತೆ:
ಕಲೆ ದಿನಗಳ ಹಿಂದೆ ಚಿರತೆ ಹನುಮಂತಪ್ಪ ಎಂಬವರ ಜಮೀನಿನ ಬಳಿ ನಾಯಿ ತಿಂದು ಕೆಲ ದೇಹದ ಭಾಗವನ್ನು ಬಿಟ್ಟುಹೋಗಿರುವ ಘಟನೆ ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಗೊಂಗಡಿಪುರದಲ್ಲಿ ನಡೆದಿದೆ.
ನಾಯಿ ಸತ್ತಿರುವ ಜಾಗದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿತ್ತು. ಚಿರತೆ ಜೊತೆ ಎರಡು ಮರಿಗಳನ್ನೂ ಸ್ಥಳೀಯರು ನೋಡಿದ್ದು, ಆತಂಕಕ್ಕೆ ತುತ್ತಾಗಿದ್ದರು. ಇದರಿಂದ ಸಂಜೆ ಜನರು ಮನೆಯಿಂದ ಹೊರ ಬರಲು ಭಯ ಪಡುತ್ತಿದ್ದಾರೆ.



Join Whatsapp