ನವದೆಹಲಿ: ಭಾರತೀಯ ಮೂಲದ ಲಿಯೋ ವರಾದ್ಕರ್ ಎರಡನೇ ಬಾರಿಗೆ ಐರ್ಲೆಂಡ್ ಪ್ರಧಾನಿಯಾಗಲಿದ್ದಾರೆ.
ಪ್ರಸ್ತುತ ಉಪಪ್ರಧಾನಿಯಾಗಿರುವ ವರಾದ್ಕರ್, ಶನಿವಾರ ಪ್ರಧಾನಿ ಹುದ್ದೆ ಅಲಂಕರಿಸಲಿದ್ದಾರೆ.
43 ವರ್ಷ ವಯಸ್ಸಿನ ವರಾದ್ಕರ್ ಮಹಾರಾಷ್ಟ್ರದ ವರದ್ ಗ್ರಾಮದ ವೈದ್ಯ ಅಶೋಕ್ ವರಾದ್ಕರ್ ಅವರ ಪುತ್ರರಾಗಿದ್ದು, 1960ರ ದಶಕದಲ್ಲಿ ಅಶೋಕ್ ವರಾದ್ಕರ್ ಪಾಶ್ಚಾತ್ಯ ಬ್ರಿಟನ್ ಗೆ ವಲಸೆ ಹೋಗಿದ್ದರು. ವರಾದ್ಕರ್ ತಾಯಿ ಐರಿಷ್ ಆಗಿದ್ದಾರೆ.
ವರಾದ್ಕರ್ ಅವರ ಪಕ್ಷ ‘ಫೈನ್ ಗೇಲ್’ ಮತ್ತು ಪ್ರಸ್ತುತ ಪ್ರಧಾನಿಯಾಗಿರುವ ಮೈಕೆಲ್ ಮಾರ್ಟಿನ್ ಅವರ ‘ಫಿಯಾನಾ ಫೇಲ್ ಪಾರ್ಟಿ’ಗಳ ನಡುವೆ 2020ರ ಚುನಾವಣೆ ನಂತರ ಅಧಿಕಾರ ಹಂಚಿಕೆ ಸೂತ್ರದ ಅಡಿಯಲ್ಲಿ ಸರ್ಕಾರ ರಚನೆಯಾಗಿತ್ತು. ಅದರಂತೆ ಈ ಬಾರಿ ವರಾದ್ಕರ್ ಪ್ರಧಾನಿಯಾಗುತ್ತಿದ್ದಾರೆ.
ಲಿಯೋ ಅವರು ಈ ಹಿಂದೆ 2017 ರಿಂದ 2020 ರವರೆಗೆ ಐರ್ಲೆಂಡ್ ನ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.