ಶ್ರೀಲಂಕಾ ತಮಿಳರ ವಾಪಸ್ ಪ್ರಕ್ರಿಯೆಯನ್ನು ಕಾನೂನುಬದ್ಧವಾಗಿ ನಿಭಾಯಿಸುತ್ತೇವೆ: ಸಿಎಂ ಸ್ಟಾಲಿನ್

Prasthutha|

ಚೆನ್ನೈ: ಶ್ರೀಲಂಕಾದ ತಮಿಳರು ರಾಜ್ಯಕ್ಕೆ ಹಠಾತ್ ಆಗಮನವನ್ನು ಗಮನಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಗುರುವಾರ ಈ ಸಮಸ್ಯೆಯನ್ನು ಕಾನೂನುಬದ್ಧವಾಗಿ ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಸರ್ಕಾರವು ಕೇಂದ್ರದೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದ್ದಾರೆ.

- Advertisement -

ಲಂಕಾ ಪ್ರಜೆಗಳು ಭೀಕರ ಬಿಕ್ಕಟ್ಟನ್ನು ಎದುರಿಸುತ್ತಿರುವುದರಿಂದ ರಾಷ್ಟ್ರದಿಂದ ಪಲಾಯನಗೈದು ತಮಿಳುನಾಡು ತೀರಕ್ಕೆ ಗುಂಪು ಗುಂಪಾಗಿ ತಲುಪುತ್ತಿರುವ ಕುರಿತು ಮಾಧ್ಯಮ ವರದಿಗಳನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಸಮಸ್ಯೆಯನ್ನು ಕಾನೂನುಬದ್ಧವಾಗಿ ನಿಭಾಯಿಸಲು ಕೇಂದ್ರ ಸರ್ಕಾರದೊಂದಿಗೆ ಸಂಪರ್ಕ ಸಾಧಿಸಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಹೇಳಿದರು.

ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 10 ಸದಸ್ಯರ ಗುಂಪು ತಮ್ಮ ಆರ್ಥಿಕ ಬಿಕ್ಕಟ್ಟಿನಿಂದ ಪಲಾಯನ ಮಾಡಿ, ಬುಧವಾರ ರಾಮೇಶ್ವರಂಗೆ ಆಗಮಿಸಿತು. ಇದಕ್ಕೂ ಮೊದಲು ಆರು ಮಂದಿ ಲಂಕಾ ಪ್ರಜೆಗಳು ತಮಿಳುನಾಡು ಪ್ರವೇಶಿಸಿದ್ದರು.

Join Whatsapp