ವಿಧಾನ ಪರಿಷತ್ ಚುನಾವಣೆ: RSS ಕೇಂದ್ರ ಕಚೇರಿ ಇರುವ ನಾಗಪುರದಲ್ಲಿ ಬಿಜೆಪಿಯನ್ನು ಸೋಲಿಸಿದ ಮಹಾರಾಷ್ಟ್ರ ವಿಕಾಸ ಅಘಾಡಿ

Prasthutha|

ಮುಂಬೈ: ಮಹರಾಷ್ಟ್ರದಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ RSS ಕೇಂದ್ರ ಕಚೇರಿ ಇರುವ ನಾಗಪುರದಲ್ಲಿ ಬಿಜೆಪಿಯನ್ನು ಮಹಾರಾಷ್ಟ್ರ ವಿಕಾಸ ಅಘಾಡಿ ಅಭ್ಯರ್ಥಿ ಸೋಲಿಸಿದ್ದಾರೆ.
ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಅಧಿಕಾರಕ್ಕೆ ಬಂದ ಬಳಿಕ ಎದುರಾದ ಮೊದಲ ಚುನಾವಣೆ ಇದಾಗಿದ್ದು, ಎಂವಿಎ- ಮಹಾರಾಷ್ಟ್ರ ವಿಕಾಸ ಅಘಾಡಿ ಎದುರು ಎದುರಾದ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಸಿದೆ.

- Advertisement -


ಗುರುವಾರ ಸಂಜೆಯೇ ನಾಸಿಕ್ ವಿಭಾಗದ ಪದವೀಧರ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿ ಸತ್ಯಜೀತ್ ತಾಂಬೆಯವರು ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. ಇಲ್ಲಿ ಎಂವಿಎಯ ಶುಭಾಂಗಿ ಪಾಟೀಲ್ ಎರಡನೆಯ ಸ್ಥಾನ ಪಡೆದಿದ್ದಾರೆ.


ಎಂವಿಎ ಎರಡು ಕಡೆ ಗೆದ್ದಿದ್ದು ಒಂದು ಸಂಘಪರಿವಾರದ ಕೇಂದ್ರ ಕಚೇರಿ ಇರುವ ನಾಗಪುರದಲ್ಲಿ ಗೆಲುವು ತನ್ನದಾಗಿಸಿಕೊಂಡಿದೆ.
ಸತ್ಯಜೀತ್ ತಾಂಬೆಯವರು ಕಾಂಗ್ರೆಸ್ಸಿಗರಾಗಿದ್ದು ಎಂವಿಎ ಅಭ್ಯರ್ಥಿ ಬೇರೆ ಕಣಕ್ಕಿಳಿದುದರಿಂದ ತಾಂಬೆ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದಾರೆ. ಸದ್ಯವೇ ತನ್ನ ಮುಂದಿನ ರಾಜಕೀಯ ನಿಲುವನ್ನು ಪ್ರಕಟಿಸುವುದಾಗಿ ಅವರು ಹೇಳಿದ್ದಾರೆ.

- Advertisement -


ಅಮರಾವತಿ ಪದವೀಧರ ಕ್ಷೇತ್ರ ವಲಯದಲ್ಲಿ ಎಂವಿಎ ಅಭ್ಯರ್ಥಿ ಧೀರಜ್ ಲಿಂಗಾಡೆಯವರು ಗೆಲುವಿನ ಮುನ್ನಡೆ ಪಡೆದಿದ್ದಾರೆಂದು ವರದಿಯಾಗಿದೆ.
ನಾಗಪುರವು ಆರ್ ಎಸ್ ಎಸ್ ಕೇಂದ್ರ ಹಾಗೂ ಕೇಂದ್ರ ಮಂತ್ರಿ ನಿತಿನ್ ಗಡ್ಕರಿ, ಉಪ ಮುಖ್ಯಮಂತ್ರಿ ಫಡ್ನವೀಸ್, ರಾಜ್ಯ ಬಿಜೆಪಿ ಅಧ್ಯಕ್ಷರಾದ ಚಂದ್ರಶೇಖರ ಭವಾನ್ಕುಲೆ ವಲಯವಾಗಿದೆ. ಇಲ್ಲಿ ಎಂವಿಎ ಅಭ್ಯರ್ಥಿ ವಿದರ್ಭ ಮಾಧ್ಯಮಿಕ್ ಶಿಕ್ಷಕ ಸಂಘದ ಸುಧಾಕರ ಅಬ್ದಾಲೆ ಅದ್ಭುತ ಗೆಲುವು ಕಂಡಿದ್ದಾರೆ. ಹಾಲಿ ಎಂಎಲ್ ಸಿ ಬಿಜೆಪಿಯ ನಾಗೋ ಗನಾರ್ 16,700 ಮತಗಳಿಂದ ಸೋಲುಂಡಿದ್ದಾರೆ.



Join Whatsapp