‘ಟಿಪ್ಪು ಅವಮಾನಿಸಿ ನಿರ್ಮಿಸಿದ ನಾಟಕದ ವಿರುದ್ಧ ಕಾನೂನು ಹೋರಾಟ’ : ಶಾಸಕ ತನ್ವೀರ್ ಸೇಠ್

Prasthutha|

ಮೈಸೂರು : ಸ್ವಾತಂತ್ರ್ಯ ಸೇನಾನಿ ಟಿಪ್ಪುವನ್ನು ಅವಮಾನಿಸಿ ನಿರ್ಮಿಸಿರುವ ‘ಟಿಪ್ಪು ನಿಜ ಕನಸುಗಳು ‘ ನಾಟಕದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಶಾಸಕ ತನ್ವಿರ್ ಸೇಠ್ ಹೇಳಿದ್ದಾರೆ.

- Advertisement -

ಈ ಕುರಿತು ರಾಜೀವ್‌ನಗರದ ಅಲ್‌ಬದರ್ ಮೈದಾನದಲ್ಲಿ ಟಿಪ್ಪು ಜಯಂತಿ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಇದು ಆಡಳಿತ ವರ್ಗದ ಓಲೈಕೆಗಾಗಿ ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ನಿರ್ಮಿಸಿರುವ ನಾಟಕವಾಗಿದೆ. ಇದರಲ್ಲಿ ಟಿಪ್ಪುವನ್ನು ಅವಮಾನಿಸಲಾಗಿದೆ. ಈ ನಾಟಕದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.  

 ಇಂತಹಾ ವೇದಿಕೆಗಳು ಯುವ ಕಲಾವಿದರಿಗೆ ನೆಲೆಯಾಗಬೇಕು.  ತಮ್ಮ ರಾಜಕೀಯ ಅಜೆಂಡಾಗಳಿಗಾಗಿ ಇಂತಹಾ ಜಾಗಗಳನ್ನು ದುರುಪಯೋಗಪಡಿಸುವುದು ಸರಿಯಲ್ಲ ಎಂದು ತನ್ವೀರ್ ಸೇಠ್ ವಿಷಾದ ವ್ಯಕ್ತಪಡಿಸಿದರು.   

- Advertisement -

ವಿಶ್ವದ ಭೂಪಟದಲ್ಲಿ ಮೈಸೂರಿಗೆ ಸ್ಥಾನ ತಂದುಕೊಟ್ಟ ಹೈದರಾಲಿ ಮತ್ತು ಟಿಪ್ಪು ತಮ್ಮ ಅಧಿಕಾರಾವಧಿಯಲ್ಲಿ ದಸರಾವನ್ನು ಮುಂದುವರಿಸಿದ್ದರು. ಆದರೆ ಈಗ ರಾಜಕೀಯ ಲಾಭಕ್ಕಾಗಿ ಇತಿಹಾಸವನ್ನು ತಿರುಚಲಾಗುತ್ತಿದೆ. ಸ್ವಾತಂತ್ರ್ಯ ಸೇನಾನಿ ಟಿಪ್ಪುವನ್ನು ಅವಮಾನಿಸುವವರ ವಿರುದ್ಧ ಹೋರಾಟ ಅನಿವಾರ್ಯ’ ಎಂದು ಅವರು ಹೇಳಿದರು.



Join Whatsapp