ಶಿರವಸ್ತ್ರ ಧರಿಸಲು ಅವಕಾಶ ಕೊಡದಿದ್ದಕ್ಕೆ ನೊಂದು ರಾಜೀನಾಮೆ ನೀಡಿದ ಉಪನ್ಯಾಸಕಿ

Prasthutha|

ತುಮಕೂರು: ಉಪನ್ಯಾಸಕಿಯೊಬ್ಬರಿಗೆ ಹಿಜಾಬ್ ಧರಿಸದೆ ಪಾಠ ಮಾಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಅವರು ಕೆಲಸಕ್ಕೆ ರಾಜೀನಾಮೆ ನೀಡಿರುವ ಘಟನೆ ತುಮಕೂರಿನ ಖಾಸಗಿ ಕಾಲೇಜೊಂದರಲ್ಲಿ ನಡೆದಿದೆ.

- Advertisement -

 ಕಳೆದ ಮೂರು ವರ್ಷದಿಂದ ತುಮಕೂರು ನಗರದ ಜೈನ್ ಪಿಯು ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಆದರೆ ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಪ್ರಾಂಶುಪಾಲರು ಹಿಜಾಬ್ ತೆಗೆದು ಪಾಠ ಮಾಡಬೇಕೆಂದು ತಿಳಿಸಿದರು. ಹೀಗಾಗಿ ಇದು ನನ್ನ ಗೌರವಕ್ಕೆ ಧಕ್ಕೆ ಬರಲಿದೆ ಎಂಬ ಉದ್ದೇಶದಿಂದ ಕೆಲಸಕ್ಕೆ ರಾಜೀನಾಮೆ ನೀಡಿರುವುದಾಗಿ ಅತಿಥಿ ಉಪನ್ಯಾಸಕಿ ಚಾಂದಿನಿ ತಿಳಿಸಿದ್ದಾರೆ.



Join Whatsapp