ಕಾರು-ಸ್ಕೂಟರ್ ಅಪಘಾತ ಪ್ರಕರಣ | ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಉಪನ್ಯಾಸಕಿ

Prasthutha|

ಮಂಗಳೂರು: ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಪದವು ಬಳಿ ಕಾರು ಹಾಗೂ ಸ್ಕೂಟರ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದ್ದು, ಕಾಲೇಜು ಉಪನ್ಯಾಸಕಿಯೋರ್ವರು ಮೃತಪಟ್ಟಿದ್ದಾರೆ.

- Advertisement -

ಮೂಲತಃ ಉಳ್ಳಾಲ ಕೋಟೆಕಾರು ನಿವಾಸಿ ಪ್ರಿಯಾಂಕಾ (31) ಮೃತಪಟ್ಟವರು. ವಾಮಂಜೂರು ನಿವಾಸಿ ವಿನೋದ್ ರಾಜ್ ಅವರ ಪತ್ನಿಯಾಗಿರುವ ಪ್ರಿಯಾಂಕಾ, ಉಳ್ಳಾಲದ ನರ್ಸಿಂಗ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಎರಡು ದಿನಗಳ ಹಿಂದೆ ರಾತ್ರಿ ವೇಳೆ ಯೆಯ್ಯಾಡಿಯ ಹರಿಪದವು ಬಳಿ ಸ್ಕೂಟರಿನಲ್ಲಿ ಹೋಗುತ್ತಿದ್ದಾಗ ವಿರುದ್ಧ ದಿಕ್ಕಿನಲ್ಲಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಗಂಭೀರವಾಗಿ ಗಾಯಗೊಂಡ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

- Advertisement -

ಈ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp