ಬೈರೂತ್: ಹಿಝ್ಬುಲ್ಲಾ ಹೋರಾಟಗಾರರ ಕೇಂದ್ರ ಕಚೇರಿ ಮೇಲೆ ಇಸ್ರೇಲ್ ಭೀಕರ ದಾಳಿ ನಡೆಸಿದೆ.
ಇಬ್ಬರು ನಾಯಕರನ್ನು ದಕ್ಷಿಣ ಲೆಬನಾನ್ ನಲ್ಲಿ ಹತ್ಯೆ ಮಾಡಿರುವುದಾಗಿ ಪ್ರಕಟಿಸಿದೆ.
ಹಿಝ್ಬುಲ್ಲಾ ಕ್ಷಿಪಣಿ ಘಟಕದ ಕಮಾಂಡರ್ ಮುಹಮ್ಮದ್ ಇಸ್ಮಾಯಿಲ್ ಮತ್ತು ಉಪಮುಖಂಡ ಹುಸೈನ್ ಅಹ್ಮದ್ ಇಸ್ಮಾಲಿ ಹತ್ಯೆಗೀಡಾಗಿದ್ದಾರೆ ಎಂದು ಇಸ್ರೇಲ್ ಪ್ರಕಟಣೆ ಹೇಳಿದೆ.
“ಐಡಿಎಫ್ ಇಂಟೆಲಿಜೆನ್ಸ್ ಪ್ರಕಾರ, ಐಎಎಫ್ ಪ್ರಸ್ತುತ ಬೈರೂತ್ ಪ್ರದೇಶದಲ್ಲಿ ಆಯಕಟ್ಟಿನ ನೆಲೆಗಳ ಮೇಲೆ ದಾಳಿ ನಡೆಸಿದೆ. ಶಸ್ತ್ರಾಸ್ತ್ರ ತಯಾರಿಕಾ ಸೌಲಭ್ಯಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡುವ ಕಟ್ಟಡ ಮತ್ತು ಪ್ರಮುಖ ಕಮಾಂಡ್ ಸೆಂಟರ್ ಗಳ ಮೇಲೆ ದಾಳಿ ನಡೆದಿದೆ” ಎಂದು ಸ್ಪಷ್ಟಪಡಿಸಿದೆ.