ಕೇಜ್ರಿವಾಲ್, ಸೊರೆನ್ ಬಿಡಗಡೆಗೊಳಿಸಿ: ಪ್ರಿಯಾಂಕ ಗಾಂಧಿ

Prasthutha|

ನವದೆಹಲಿ: ತಕ್ಷಣವೇ ಬಂಧನದಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಬಿಡುಗಡೆ ಮಾಡುವಂತೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದಾರೆ.

- Advertisement -

ರಾಮ್‌ಲೀಲಾ ಮೈದಾನದಲ್ಲಿ ಇಂಡಿಯಾ ಮೈತ್ರಿಕೂಟದಿಂದ ಆಯೋಜಿಸಿದ ‘ಪ್ರಜಾಪ್ರಭುತ್ವ ಉಳಿಸಿ’ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಇಂಡಿಯಾ ಒಕ್ಕೂಟದ 5 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಈ ಪೈಕಿ ಮೊದಲ ಬೇಡಿಕೆ ಕೇಜ್ರಿವಾಲ್ ಹಾಗೂ ಸೊರನೆ ಬಿಡುಗಡೆಯಾಗಿದ್ದರೆ, ಎರಡನೇ ಬೇಡಿಕೆ, ಚುನಾವಣಾ ಬಾಂಡ್ ಮೂಲಕ ಬಿಜೆಪಿ ಪಡೆದಿರುವ ಹಣದ ಕುರಿತು ಎಸ್‌ಐಟಿ ತನಿಖೆಯಾಗಬೇಕು ಎಂದು ಆಗ್ರಹಿಸಿದೆ.

ಲೋಕಸಭಾ ಚುನಾವಣೆಯಲ್ಲಿ ಆಯೋಗ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಬೇಕು. ಇಡಿ, ಸಿಬಿಐ ಸೇರಿದಂತೆ ಕೇಂದ್ರ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ತನ್ನಿಷ್ಟಕ್ಕೆ ಬಳಸಿಕೊಳ್ಳುವುದನ್ನು ಚುನಾವಣಾ ಆಯೋಗ ತಡೆಯಬೇಕು. ವಿಪಕ್ಷಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಕ್ರಮವನ್ನು ತಡೆಯಬೇಕು ಎಂದು ಒಟ್ಟು 5 ಬೇಡಿಕೆಗಳನ್ನು ಇಂಡಿಯಾ ಮೈತ್ರಿ ಒಕ್ಕೂಟ ಮುಂದಿಟ್ಟಿದೆ.

Join Whatsapp