“ಲರ್ನ್ ದಿ ಕುರ್‌ಆನ್”13ನೇ ಹಂತದ ಪಬ್ಲಿಕ್ ಪರೀಕ್ಷಾ ಫಲಿತಾಂಶ

Prasthutha|

- Advertisement -

ಮಂಗಳೂರು: ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್ ಇದರ ಅಧೀನ ಸಂಸ್ಥೆಗಳಾದ ಸಲಫಿ ಎಜ್ಯುಕೇಶನ್ ಬೋರ್ಡ್, ಸಲಫಿ ಗರ್ಲ್ಸ್ ಮೂವ್‌ಮೆಂಟ್, ಕರ್ನಾಟಕ ಸಲಫಿ ಫೌಂಡೇಶನ್ ರಿಯಾದ್ ಮತ್ತು ಮುಜಾಹಿದ್ ಗರ್ಲ್ಸ್ ಮೂವ್‌ಮೆಂಟ್ ರಿಯಾದ್ ಇವುಗಳ ಜಂಟಿ ಆಶ್ರಯದಲ್ಲಿ 30.06.2024 ರಂದು ನಡೆದ 13ನೇ ಹಂತದ ಲರ್ನ್ ದಿ ಕುರ್ ಆನ್ ಪಬ್ಲಿಕ್ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ.
ಕನ್ನಡ ವಿಭಾಗದಲ್ಲಿ ನಿಶಾನ (UL-LA006) ಪ್ರಥಮ, ಆಶೂರ (DE-LA010) ಪ್ರಥಮ, ತಸ್ನೀಮ(DE-LA029) ) ದ್ವಿತೀಯ, ನಸೀಮ (UP-LA041) ತೃತೀಯ, ಮುಬಶಿರ(DE-LA015) ತೃತೀಯ ಸ್ಥಾನ ಪಡೆದಿದ್ದಾರೆ.
ಇಂಗ್ಲೀಷ್ ವಿಭಾಗದಲ್ಲಿ ನೀಷ್ಮ (DE-LA028) ಪ್ರಥಮ , ಅಝೀಝುರ್ರಹ್ಮಾನ್ (MU-GE005)ದ್ವಿತೀಯ, ನಫೀಸ ಹಿಬ (TA-LA024) ತೃತೀಯ ಸ್ಥಾನ ಪಡೆದಿದ್ದಾರೆ.
ಕನ್ನಡ ಹಾಗೂ ಇಂಗ್ಲೀಷ್ ವಿಭಾಗ ದಲ್ಲಿ ಪ್ರಥಮ ಸ್ಥಾನ ಪಡೆದ ಇಬ್ಬರಿಗೆ ಉಚಿತ ಉಮ್ರಾ ಪ್ರಯಾಣ ಹಾಗೂ ಉಳಿದ ವಿಜೇತರಿಗೆ ಚಿನ್ನದ ನಾಣ್ಯ ಗಳನ್ನು ನೀಡಲಾಗುವುದು ಹಾಗೂ 14 ಮಂದಿಗೆ ಪ್ರೋತ್ಸಾಹಕರ ಬಹುಮಾನವನ್ನು ನೀಡಲಾಗುವುದು ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಿದೆ.



Join Whatsapp