ನವದೆಹಲಿ: ಉತ್ತರ ಪ್ರದೇಶದ ವಕೀಲರೊಬ್ಬರು ಭಾರತೀಯ ರೈಲ್ವೆ ಇಲಾಖೆ ಹೆಚ್ಚುವರಿಯಾಗಿ ವಿಧಿಸಿದ 20 ರೂ ಗಾಗಿ ಬರೋಬ್ಬರಿ 22 ವರ್ಷ ಕಾನೂನು ಹೋರಾಟ ನಡೆಸಿ ಕಡೆಗೂ ಜಯ ಗಳಿಸಿದ್ದಾರೆ.
ವೃತ್ತಿಯಲ್ಲಿ ವಕೀಲರಾಗಿದ್ದ ತುಂಗನಾಥ್ ಚತುರ್ವೇದಿ ಎಂಬವರು 1999 ರಲ್ಲಿ ಖರೀದಿಸಿದ ದುಬಾರಿ ಬೆಲೆಯ ಟಿಕೆಟ್ ಗೆ ಸಂಬಂಧಿಸಿದ ದಾವೆ ಇದಾಗಿದೆ.
ಅವರು ಮಥುರಾದಿಂದ ಮೊರಾದಾಬಾದ್‌ಗೆ ಪ್ರಯಾಣಿಸುತ್ತಿದ್ದಾಗ ಮಥುರಾ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಅವರು ಪಡೆದ ಎರಡು ಟಿಕೆಟುಗಳಿಗೆ ಕೇಂದ್ರದ ಗುಮಾಸ್ತನು 20 ರೂ. ಹೆಚ್ಚು ಶುಲ್ಕ ವಿಧಿಸಿದ್ದನು.
ಇದರ ವಿರುದ್ಧ ತುಂಗನಾಥ್ ನ್ಯಾಯಾಲಯದ ಮೊರೆ ಹೋಗಿದ್ದರು. ಮಥುರಾ ನ್ಯಾಯಾಲಯವು 22 ವರ್ಷಗಳ ಕಾಲ ಬರೋಬ್ಬರಿ 120 ಬಾರಿ ಈ ಪ್ರಕರಣದ ವಿಚಾರಣೆ ನಡೆಸಿದ್ದು , ತುಂಗನಾಥ್ ಅವರಿಗೆ 20 ರೂ ಹೆಚ್ಚುವರಿ ಶುಲ್ಕದ ಜೊತೆ 15000 ಬಡ್ಡಿಯನ್ನೂ ಬಡ್ಡಿಯಾಗಿ ನೀಡಲು ರೈಲ್ವೆ ಇಲಾಖೆಗೆ ಆದೇಶ ನೀಡಿದೆ.