ಜೈಲಿನಿಂದ ಲಾರೆನ್ಸ್ ಬಿಷ್ಣೋಯ್ ಮಾಧ್ಯಮಕ್ಕೆ ಸಂದರ್ಶನ: 7 ಪೊಲೀಸರು ಸಸ್ಪೆಂಡ್

Prasthutha|

ನವದೆಹಲಿ: ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ 2022 ರಲ್ಲಿ ಜೈಲಿನಿಂದ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಪಂಜಾಬ್ ಪೊಲೀಸರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ.

- Advertisement -


ಅಮಾನತುಗೊಂಡವರಲ್ಲಿ ಇಬ್ಬರು ಉಪ ಅಧೀಕ್ಷಕ ಶ್ರೇಣಿಯ ಅಧಿಕಾರಿಗಳಾದ ಗುರ್ಶರ್ ಸಿಂಗ್ ಮತ್ತು ಸಮ್ಮರ್ ವನೀತ್, ಸಬ್-ಇನ್ಸ್ಪೆಕ್ಟರ್ ರೀನಾ, ಸಿಐಎ, ಖರಾರ್ (ಎಸ್ಎಎಸ್ ನಗರ), ಸಬ್-ಇನ್ಸ್ಪೆಕ್ಟರ್ (ಎಲ್ಆರ್) ಜಗತ್ಪಾಲ್ ಜಂಗು, ಎಜಿಟಿಎಫ್, ಸಬ್-ಇನ್ಸ್ಪೆಕ್ಟರ್ ಶಗಂಜಿತ್ ಸಿಂಗ್ (ಆಗಿನ ಕರ್ತವ್ಯ ಅಧಿಕಾರಿ), ಮತ್ತು ಹೆಡ್ ಕಾನ್ಸ್ಟೆಬಲ್ ಓಂ ಪ್ರಕಾಶ್ ಸೇರಿದ್ದಾರೆ. ಅಧಿಕಾರಿಗಳು ಅಜಾಗರೂಕತೆ ಮತ್ತು ನಿರ್ಲಕ್ಷ್ಯವಹಿಸಿದ್ದಾರೆ ಎಂದು ಈ ಕ್ರಮಕೈಗೊಳ್ಳಲಾಗಿದೆ.

ಲಾರೆನ್ಸ್ ಬಿಷ್ಣೋಯ್ ಸೆ.2022 ರಲ್ಲಿ ಖರಾರ್ ಸಿಐಎ ವಶದಲ್ಲಿದ್ದ. ಆತನ ಸಂದರ್ಶನವನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಸಲಾಗಿತ್ತು. ಈ ಪ್ರಕರಣದ ತನಿಖೆಗೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರ್ದೇಶನದ ಮೇರೆಗೆ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. ತನಿಖೆ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂದರ್ಶನ ನಡೆಸಿರುವುದು ಬೆಳಕಿಗೆ ಬಂದಿತ್ತು.

- Advertisement -


ಲಾರೆನ್ಸ್ ಬಿಷ್ಣೋಯ್ ಜೈಪುರ ಸೆಂಟ್ರಲ್ ಜೈಲಿನಲ್ಲಿ ಸಂದರ್ಶಿಸಲಾಗಿದೆ ಎಂಬುದಕ್ಕೆ ವಿಶೇಷ ತನಿಖಾ ತಂಡವು ಪುರಾವೆಗಳನ್ನು ಸಲ್ಲಿಸಿತ್ತು. ತನಿಖಾ ವರದಿಯ ಆಧಾರದ ಮೇಲೆ ಶುಕ್ರವಾರ ರಾಜ್ಯ ಗೃಹ ಕಾರ್ಯದರ್ಶಿ ಗುರುಕಿರತ್ ಕಿರ್ಪಾಲ್ ಸಿಂಗ್ ಅವರು ಅಮಾನತು ಆದೇಶವನ್ನು ಹೊರಡಿಸಿದ್ದಾರೆ.



Join Whatsapp