ಸಚಿವ ಪೂಜಾರಿ ತವರಿನಲ್ಲಿ ಕೊರಗ ಕಾಲನಿಯಲ್ಲಿ ಲಾಠಿಚಾರ್ಜ್: ಆದಿವಾಸಿ ಹಕ್ಕುಗಳ ಸಮಿತಿ ಖಂಡನೆ

Prasthutha|

ಬೆಳ್ತಂಗಡಿ: ರಾಜ್ಯದ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರ ತವರೂರು ಕೋಟತಟ್ಟು ಬಾರಿಕೆರೆ ಕೊರಗ ಕಾಲನಿಯಲ್ಲಿ ಡಿಸೆಂಬರ್ 27 ರ ರಾತ್ರಿ ಕೋಟ ಕೊರಗ ಸಮುದಾಯದ ಮನೆಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮಕ್ಕೆ ಏಕಾಏಕಿ ಕೋಟ ಪೊಲೀಸರು ನುಗ್ಗಿ ಲಾಠಿಚಾರ್ಜ್ ನಡೆಸಿ ದೌರ್ಜನ್ಯ ಎಸಗಿರುವುದು ಅತ್ಯಂತ ಖಂಡನೀಯ. ಇದು ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರ ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಬೆಳ್ತಂಗಡಿ ತಾಲೂಕು ಸಮಿತಿ ಟೀಕಿಸಿದೆ.

- Advertisement -

ಕೋಟತಟ್ಟು ಕೊರಗ ಕಾಲನಿಯ ರಾಜೇಶ್ ಎಂಬುವರ ಮೆಹಂದಿ ಕಾರ್ಯಕ್ರಮದಲ್ಲಿ ಡಿಜೆ ಹಾಕಿರುವ ವಿಚಾರದಲ್ಲಿ ಕೋಟ ಪೊಲೀಸರು ಅನಾಗರಿಕರಂತೆ ವರ್ತಿಸುವ ಮೂಲಕ ಮದುಮಗ ಸೇರಿದಂತೆ ಕೊರಗ ಸಮುದಾಯದ ಮೇಲೆ ಲಾಠಿಚಾರ್ಜ್ ಮಾಡಿದ್ದು , ಮಹಿಳಾ ಪೊಲೀಸರ ಅನುಪಸ್ಥಿತಿಯಲ್ಲಿ ಮಹಿಳೆಯರು, ಮಕ್ಕಳ ಮೇಲೆ ಅನಾಗರಿಕರಂತೆ ದಾಳಿ ನಡೆಸಿದ್ದಾರೆ.

ಇದರಿಂದಾಗಿ ಹಲವರು ಗಾಯಗೊಂಡಿದ್ದಾರೆ. ರಾಜ್ಯದ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕಾಲಬುಡದಲ್ಲಿಯೇ ಇಂತಹ ದೌರ್ಜನ್ಯ ನಡೆದರೆ ಇಡೀ ರಾಜ್ಯದ ಗತಿಯೇನು ಎಂದು ಸಮಿತಿ ಪ್ರಶ್ನಿಸಿದೆ.

- Advertisement -



Join Whatsapp