ಗಾಝಾ ವಸತಿ ಕಟ್ಟಡದಲ್ಲಿ ತಡರಾತ್ರಿ ಬಾಂಬ್ ದಾಳಿ: 30 ಸಾವು

Prasthutha|

24 ಗಂಟೆಯಲ್ಲಿ 266 ಪ್ಯಾಲೆಸ್ತೀನಿಯರ ಸಾವು

- Advertisement -

ಗಾಝಾ: ಗಾಝಾದಲ್ಲಿ ಇಸ್ರೇಲಿ ವೈಮಾನಿಕ ದಾಳಿ ಮುಂದುವರೆದಿದೆ. ಗಾಝಾ ವಸತಿ ಕಟ್ಟಡದಲ್ಲಿ ತಡರಾತ್ರಿ ಬಾಂಬ್ ದಾಳಿ ನಡೆದಿದ್ದು, ಸುಮಾರು 30 ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೇಸ್ತೀನಿ ಮಾಧ್ಯಮಗಳು ಹೇಳಿವೆ.

ಜಬಾಲಿಯಾ ನಿರಾಶ್ರಿತರ ಶಿಬಿರದ ಅಲ್-ಶುಹಾದಾ ಪ್ರದೇಶದಲ್ಲಿದ್ದ ಕಟ್ಟಡ ಬಾಂಬ್ ದಾಳಿಯಿಂದ  ನೆಲಸಮಗೊಂಡಿದೆ. ಜೊತೆಗೆ ಅಕ್ಕಪಕ್ಕದ ಮನೆಗಳೂ ಸಹ ಹಾನಿಯಾಗಿವೆ ಎಂದು ವರದಿ ಹೇಳಿದೆ.

- Advertisement -

ಎನ್‌ಕ್ಲೇವ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ಇಸ್ರೇಲ್ ವೈಮಾನಿಕ ದಾಳಿಯಿಂದ 117 ಮಕ್ಕಳು ಸೇರಿದಂತೆ 266 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯ ತಿಳಿಸಿದೆ. ಅಕ್ಟೋಬರ್ 7ರಂದು ಪ್ರಾರಂಭವಾದ ಇಸ್ರೇಲ್​​ನ 2 ವಾರಗಳ ಬಾಂಬ್ ದಾಳಿಯಲ್ಲಿ ಗಾಝಾ ಪಟ್ಟಿಯಲ್ಲಿ ಸಾವಿನ ಸಂಖ್ಯೆ 4600ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್ಲದೆ, ಇಂದು ಮುಂಜಾನೆ ಗಾಝಾ ಪಟ್ಟಿಯಲ್ಲಿರುವ 3 ಆಸ್ಪತ್ರೆಗಳ ಸಮೀಪದಲ್ಲಿ ಇಸ್ರೇಲ್ ಬಾಂಬ್ ದಾಳಿ ನಡೆಸಿದೆ ಎಂದು ಪ್ಯಾಲೇಸ್ತೀನ್ ಮಾಧ್ಯಮಗಳು ವರದಿ ಮಾಡಿದೆ. ಆದರೆ, ಆಸ್ಪತ್ರೆಗಳು ಹಾನಿಗೊಳಗಾಗಿವೆಯೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಗಾಝಾ ನಗರದ ಶಿಫಾ, ಅಲ್-ಕುದ್ಸ್ ಆಸ್ಪತ್ರೆಗಳ ಬಳಿ ಮತ್ತು ಎನ್‌ಕ್ಲೇವ್‌ನ ಉತ್ತರದಲ್ಲಿರುವ ಇಂಡೋನೇಷಿಯನ್ ಆಸ್ಪತ್ರೆಯ ಬಳಿ ಇಸ್ರೇಲ್​ ದಾಳಿ ನಡೆದಿದೆ ಎಂದು ವರದಿ ಹೇಳಿದೆ.

Join Whatsapp