ಲತಾ ಮಂಗೇಶ್ಕರ್ ಗೆ ಸಂಸತ್ ನಲ್ಲಿ ಗೌರವ ನಮನ

Prasthutha|

ನವದೆಹಲಿ: ಸಂಸತ್ತಿನ ಉಭಯ ಸದನಗಳಲ್ಲಿ ಸದಸ್ಯರು ಗಾಯಕಿ ಲತಾ ಮಂಗೇಶ್ಕರ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಗೌರವ ಸೂಚಕವಾಗಿ ಲೋಕಸಭೆ ಮತ್ತು ರಾಜ್ಯಸಭೆಯನ್ನು ಒಂದು ಗಂಟೆಗಳ ಕಾಲ ಮುಂದೂಡಲಾಯಿತು.

- Advertisement -

ಸೋಮವಾರ ಬೆಳಗ್ಗೆ 10 ಗಂಟೆಗೆ ಸದನ ಸಭೆ ಸೇರಿದಾಗ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಮಂಗೇಶ್ಕರ್ ಅವರ ಸಂತಾಪ ಪತ್ರ ಓದಿದ ನಂತರ ರಾಜ್ಯಸಭೆಯನ್ನು ಒಂದು ಗಂಟೆ ಕಾಲ ಮುಂದೂಡುವ ನಿರ್ಧಾರ ಕೈಗೊಂಡರು.

ಲೋಕಸಭೆಯಲ್ಲೂ ಸ್ಪೀಕರ್ ಓಂ ಬಿರ್ಲಾ ಅವರು ಮಂಗೇಶ್ಕರ್ ಅವರ ಸಂತಾಪ ಸೂಚಕ ಪತ್ರ ಓದುತ್ತಾರೆ. ಅಲ್ಲಿಯೂ ಕಲಾಪವನ್ನು ಒಂದು ಗಂಟೆಗಳ ಕಾಲ ಮುಂದೂಡುತ್ತಾರೆ ಎಂದು ಮೂಲಗಳು ತಿಳಿಸಿವೆ.

- Advertisement -

ಗಾಯಕಿ ಲತಾ ಮಂಗೇಶ್ಕರ್ 92 ನೇ ವಯಸ್ಸಿನಲ್ಲಿ ಭಾನುವಾರ ಬೆಳಿಗ್ಗೆ ಮುಂಬೈ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ನಿಧನರಾದರು. ಅವರು COVID-19 ನಿಂದ ಬಳಲುತ್ತಿದ್ದು ,ಜನವರಿಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ಸೋಮವಾರ ಲೋಕಸಭೆಯಲ್ಲಿ ಮತ್ತು ಮಂಗಳವಾರ ರಾಜ್ಯಸಭೆಯಲ್ಲಿ ಚರ್ಚೆಗೆ ಉತ್ತರಿಸುವ ಸಾಧ್ಯತೆಯಿದೆ.

Join Whatsapp