ರೊನಾಲ್ಡೊ ವಿರುದ್ಧದ ಅತ್ಯಾಚಾರ ಮೊಕದ್ದಮೆ ವಜಾ

Prasthutha|

ವಾಷಿಂಗ್ಟನ್: ಖ್ಯಾತ ಫುಟ್’ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ವಿರುದ್ಧದ ಲಾಸ್ ವೇಗಾಸ್ ನಲ್ಲಿ ನಡೆದಿದ್ದ ಅತ್ಯಾಚಾರ ಮೊಕದ್ದಮೆಯನ್ನು ಅಮೆರಿಕ ಜಿಲ್ಲಾ ನ್ಯಾಯಾಧೀಶರು ವಜಾಗೊಳಿಸಿದ್ದಾರೆ. ಈ ಆರೋಪವು ರೊನಾಲ್ಡೊ ವಿರುದ್ಧದ ವರ್ಚಸ್ಸಿಗೆ ಕಳಂಕ ತರುವ ಪ್ರಯತ್ನ ಎಂದಿರುವ ಫೆಡರಲ್ ನ್ಯಾಯಾಧೀಶರಾದ ಜೆನ್ನಿಫರ್ ಡೋರ್ಸೆ ಮೊಕದ್ದೆಮೆಯನ್ನು ವಜಾಗೊಳಿಸಿದ್ದಾರೆ.

- Advertisement -

ಮಹಿಳೆ ಸಲ್ಲಿಸಿರುವ ಮೊಕದ್ದಮೆಯು ಆಕೆಯ ವಕೀಲರಿಂದ ಪಡೆದ “ಪುರ್ಲೋಯಿನ್ಡ್” ಗೌಪ್ಯ ದಾಖಲೆಗಳನ್ನು ಆಧರಿಸಿ ನ್ಯಾಯಾದೀಶರು ಈ ಆದೇಶ ನೀಡಿದ್ದಾರೆ. ಮಹಿಳೆಯ ನಡವಳಿಕೆಯಿಂದ ರೊನಾಲ್ಡೊ ಅವರ ಗೌರವಕ್ಕೆ ಹಾನಿಯಾಗಿದೆ ಎಂದು ಅಭಿಪ್ರಯಾಯಪಟ್ಟಿದ್ದಾರೆ. ತಮ್ಮ 42 ಪುಟಗಳ ಆದೇಶದಲ್ಲಿ ಪ್ರಕರಣವನ್ನು ಮತ್ತೆ ಸಲ್ಲಿಸಲು ಯಾವುದೇ ಆಯ್ಕೆಯಿಲ್ಲದೆ ಸಂಪೂರ್ಣವಾಗಿ ವಜಾಗೊಳಿಸುವಂತೆ ಸೂಚಿಸಿದ್ದಾರೆ.

Join Whatsapp