‘ಲಂಕೇಶ್’ ಉತ್ತಮ ವ್ಯಕ್ತಿತ್ವದ ಮೇರು ವ್ಯಕ್ತಿ: ಆಯನೂರು ಮಂಜುನಾಥ್

Prasthutha|

ಶಿವಮೊಗ್ಗ: ‘ಸಿದ್ಧಾಂತಗಳ ಸಂಘರ್ಷವಿದ್ದರೂ, ವೈಯಕ್ತಿಕವಾಗಿ, ಬರಹಗಳ ಮೂಲಕ ಲಂಕೇಶ್ ಅವರು ನಮ್ಮಂತಹ ಯುವಕರ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದರು’ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ ಹೇಳಿದರು.

- Advertisement -

ಪತ್ರಕರ್ತ ಬಿ.ಚಂದ್ರೇಗೌಡ ಅವರು ರಚಿಸಿರುವ ‘ಲಂಕೇಶ್ ಜೊತೆ‘ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು,‘ಬದುಕಿನ ಪ್ರತಿ ಘಟನೆಗಳನ್ನೂ ವಿಭಿನ್ನವಾಗಿ ನೋಡುವ, ವಿಶ್ಲೇಷಿಸುವ, ಟೀಕಿಸುವ ಗುಣ ಲಂಕೇಶ್ ಅವರಲ್ಲಿ ಕರಗತವಾಗಿತ್ತು. ಪ್ರಸ್ತುತ ಕಾಲಘಟ್ಟದಲ್ಲಿ ಒಂದು‌ ಸಣ್ಣ ಟೀಕೆ ಸಹ ಪರಸ್ಪರ ಮುಖ ತಿರುಗಿಸುವ, ದ್ವೇಷ ಹರಡುವ ಕೆಲಸ ಮಾಡುತ್ತಿದೆ. ಲಂಕೇಶ್ ಅಂತಹ ಹತ್ತು ಹಲವು ಟೀಕೆ ಮಾಡಿದಾಗಲೂ ಸಮಾಜ ಸ್ಥಿತಪ್ರಜ್ಞೆಯಿಂದ ಸ್ವೀಕರಿಸುತ್ತಿತ್ತು’ ಎಂದು ಗತ ಘಟನೆಗಳನ್ನು ಮೆಲುಕು ಹಾಕಿದರು.

ಮಿಲಿಂದ್ ಎಜುಕೇಶನ್ ಟ್ರಸ್ಟ್, ಹೊಂಗಿರಣ ಸಂಸ್ಥೆ ಹಾಗೂ ಶಿವಮೊಗ್ಗ ಪ್ರೆಸ್‌ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪ್ರೆಸ್‌ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, ಕೃತಿಯ ಲೇಖಕ ಬಿ. ಚಂದ್ರೆಗೌಡ, ವಕೀಲರಾದ ಎಲ್.ಎಚ್. ಅರುಣ್ ಕುಮಾರ್, ಹೊಂಗಿರಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಸಾಸ್ವೆಹಳ್ಳಿ ಸತೀಶ್ ಹಾಜರಿದ್ದರು. ಚಂದ್ರಹಾಸ ಹಿರೇಮಳಲಿ ಸ್ವಾಗತಿಸಿದರು. ಉಪನ್ಯಾಸಕ ಬಿ. ಎಲ್. ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು.

Join Whatsapp