ಸಕಲೇಶಪುರ | ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತ: ಜು.29ರವರೆಗೆ ಎಕ್ಸ್ ಪ್ರೆಸ್ ರೈಲುಗಳ ಓಡಾಟ ರದ್ದು

Prasthutha|

ಸಕಲೇಶಪುರ: ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಶಿರಾಡಿ ಘಾಟಿಯ ಎಡಕುಮೇರಿಯಲ್ಲಿ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿತ ಆಗಿದೆ. ಹೀಗಾಗಿ ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಯಡಕುಮೇರಿ ಮತ್ತು ಕಡಗರವಳ್ಳಿ ವಿಭಾಗದ ನಡುವೆ ಭೂಕುಸಿತ ಸಂಭವಿಸಿದೆ. ಈ ಕಾರಣ ಕೆಲವು ರೈಲುಗಳನ್ನು ಮರು ನಿಗದಿಪಡಿಸಲಾಗಿದೆ ಜತೆಗೆ ರದ್ದುಪಡಿಸಲಾಗಿದೆ.

- Advertisement -

ರೈಲು ಸೇವೆಗಳು ರದ್ದು

  1. 1.ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್-ವಿಜಯಪುರ ವಿಶೇಷ ಎಕ್ಸ್ಪ್ರೆಸ್ ರೈಲು ದಿನಾಂಕ 27.07.2024 ರಂದು ರದ್ದಾಗಿದೆ.
  2. 2.ರೈಲು ಸಂಖ್ಯೆ 07377 ವಿಜಯಪುರ-ಮಂಗಳೂರು ಸೆಂಟ್ರಲ್ ಸ್ಪೆಷಲ್ ಎಕ್ಸ್ಪ್ರೆಸ್ ರೈಲು ದಿನಾಂಕ 27.07.2024 ರಂದು ರದ್ದಾಗಿದೆ.
  3. 3.ರೈಲು ಸಂಖ್ಯೆ 16585 ಎಸ್ಎಂವಿಟಿ ಬೆಂಗಳೂರು-ಮುರ್ಡೇಶ್ವರ ಎಕ್ಸ್ಪ್ರೆಸ್ ರೈಲು ದಿನಾಂಕ 27.07.2024 ರಂದು ರದ್ದಾಗಿದೆ.
  4. 4. ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್-ಯಶವಂತಪುರ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ದಿನಾಂಕ 28.07.2024 ರಂದು ರದ್ದಾಗಿದೆ.
  5. 5.ರೈಲು ಸಂಖ್ಯೆ 06567 ಎಸ್ಎಂವಿಟಿ ಬೆಂಗಳೂರು-ಕಾರವಾರ ವಿಶೇಷ ಎಕ್ಸ್ಪ್ರೆಸ್ ರೈಲು ದಿನಾಂಕ 28.07.2024 ರಂದು ರದ್ದಾಗಿದೆ.
  6. 6.ರೈಲು ಸಂಖ್ಯೆ 06568 ಕಾರವಾರ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್ಪ್ರೆಸ್ ರೈಲು ದಿನಾಂಕ 28.07.2024 ರಂದು ರದ್ದಾಗಿದೆ.
  7. 7.ರೈಲು ಸಂಖ್ಯೆ 16586 ಮುರ್ಡೇಶ್ವರ-ಎಸ್ಎಂವಿಟಿ ಬೆಂಗಳೂರು ಎಕ್ಸ್ಪ್ರೆಸ್ ರೈಲು ದಿನಾಂಕ 28.07.2024 ರಂದು ರದ್ದಾಗಿದೆ.
  8. 8.ರೈಲು ಸಂಖ್ಯೆ 16575 ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ ರೈಲು ದಿನಾಂಕ 28.07.2024 ರಂದು ರದ್ದಾಗಿದೆ.
  9. 9.ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್ಪ್ರೆಸ್ ರೈಲು ದಿನಾಂಕ 29.07.2024 ರಂದು ರದ್ದಾಗಿದೆ.


Join Whatsapp