ಮ್ಯಾನ್ಮಾರ್ ಗಣಿಯಲ್ಲಿ ಭೂಕುಸಿತ : 70 ಮಂದಿ ಕಣ್ಮರೆ
Prasthutha: December 22, 2021

ಯಾಂಗೋನ್: ಭೂಕುಸಿತ ಉಂಟಾಗಿ ಸುಮಾರು 70 ಮಂದಿ ಕಾಣೆಯಾಗಿರುವ ಘಟನೆ ಹಪ್ಕಂತ್ ನಲ್ಲಿರುವ ಪಚ್ಚೆ ಕಲ್ಲಿನ ಗಣಿಯಲ್ಲಿ ಅವಘಡ ಸಂಭವಿಸಿದೆ.
ಓರ್ವ ವ್ಯಕ್ತಿ ಸಾವನ್ನಪ್ಪಿರುವುದು ದೃಢಪಟ್ಟಿದ್ದು, ರಕ್ಷಣಾ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
2020ರ ಜುಲೈ ತಿಂಗಳಲ್ಲೂ ಇದೇ ಗಣಿಯಲ್ಲಿ ಭೂಕುಸಿತ ಉಂಟಾಗಿ ಕನಿಷ್ಠ ನೂರು ಮಂದಿ ಬಲಿಯಾಗಿದ್ದರು. ಪಚ್ಚೆ ಕಲ್ಲುಗಳು ನೈಸರ್ಗಿಕವಾಗಿ ಸಿಗುವ ಖನಿಜಗಳಾಗಿವೆ. ಆಭರಣಗಳಲ್ಲಿ ಇವುಗಳನ್ನು ಬಳಸಲಾಗುತ್ತದೆ.
