ಮೆಟ್ಟಿಲಿನಿಂದ ಎಡವಿ ಬಿದ್ದು ಲಾಲು ಪ್ರಸಾದ್ ಯಾದವ್ ಗಂಭೀರ ಗಾಯ

Prasthutha|

ಪಟ್ನಾ: ಆರ್ ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಅವರ ಮನೆಯ ಮೆಟ್ಟಿಲು ಹತ್ತಲು ಹೋಗಿ ಎಡವಿ ಬಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ.

- Advertisement -

ಲಾಲು ಪ್ರಸಾದ್ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಕಿಡ್ನಿ ಸಮಸ್ಯೆಯ ಚಿಕಿತ್ಸೆಗಾಗಿ ವಿದೇಶಕ್ಕೆ ತೆರಳಲು ಸಿದ್ಧತೆ ನಡೆಸಿದ್ದರು.

ಸದ್ಯ ಅವರನ್ನು ಪಾಟ್ನಾದ ಪಾರಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

- Advertisement -

ಅವರ ಭುಜದಲ್ಲಿ ಮುರಿತಕ್ಕೊಳಗಾಗಿರುವುದರಿಂದ ಭುಜದ ಎಲುಬು ಸೇರಲು ಅವರಿಗೆ ಕಟ್ಟು ಹಾಕಲಾಗಿದೆ. ಭುಜದ ಮುರಿತ ಮತ್ತು ಬೆನ್ನಿನ ಗಾಯದ ಹೊರತಾಗಿ ಅವರಿಗೆ ಇನ್ಯಾವುದೇ ಸಮಸ್ಯೆಯಾಗಿಲ್ಲ ಎಂದು ತಿಳಿದು ಬಂದಿದೆ.

ಸದ್ಯ ಅವರನ್ನು ಪಾಟ್ನಾದ ಪಾರಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

ಲಾಲು ಪ್ರಸಾದ್ ಅವರಿಗೆ ಇತ್ತೀಚೆಗೆ ಭುಜದ ಆಪರೇಷನ್ ಮಾಡಲಾಗಿತ್ತು. ಅಂದಿನಿಂದ ಅವರ ಆರೋಗ್ಯ ಸ್ಥಿತಿ ಅಷ್ಟೇನೂ ಸ್ಥಿರವಾಗಿರಲಿಲ್ಲ. ಸದ್ಯ ಲಾಲೂ ಪ್ರಸಾದ್ ಯಾದವ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ಪಾರಸ್ ಆಸ್ಪತ್ರೆಯ ಅಧೀಕ್ಷಕ ಡಾ ಆಸಿಫ್ ರೆಹಮಾನ್ ತಿಳಿಸಿದ್ದಾರೆ.

Join Whatsapp