ಲಕ್ಷ್ಮೀ ‌ಹೆಬ್ಬಾಳಕರ್ ಕಾರು ಅಪಘಾತ: ಆರೋಗ್ಯದ ಬಗ್ಗೆ ವೈದ್ಯರು ಹೇಳಿದ್ದೇನು?

Prasthutha|

ಬೆಳಗಾವಿ: ಕಾರು ಅಪಘಾತವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆರೋಗ್ಯದ ಸ್ಥಿತಿಯ ಬಗ್ಗೆ ವೈದ್ಯ ರವಿ ಪಾಟೀಲ ಅವರು ಮಾಹಿತಿ ನೀಡಿದ್ದಾರೆ.

- Advertisement -

ಸಚಿವೆ ಲಕ್ಷ್ಮಿ ಹೆಬ್ಬಾಳಕರ ಬೆನ್ನಿಗೆ ಭಾರವಾದ ಪೆಟ್ಟು ಬಿದ್ದಿದೆ. ಬೆನ್ನಿನ L1 ಹಾಗೂ L4 ಫ್ರಾಕ್ಚರ್ ಆಗಿದೆ. ಎಂಆರ್‌ ಐ ಸ್ಕ್ಯಾನ್‌‌ ನಲ್ಲಿ ಎರಡು ಕಡೆ ಫ್ರಾಕ್ಚರ್ ಆಗಿರುವುದು ಗೊತ್ತಾಗಿದೆ. ಸದ್ಯ ಪೇನ್‌ ಕಿಲ್ಲರ್‌ ಕೊಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಈಗ ಸುಧಾರಿಸುತ್ತಿದ್ದಾರೆ. ಎರಡು ದಿನಗಳ ಕಾಲ ಚಿಕಿತ್ಸೆ ನೀಡಿ‌ ಡಿಸ್ಚಾರ್ಜ್ ಮಾಡುತ್ತೇವೆ. ಒಂದು ತಿಂಗಳ ಕಾಲ ಬೆಡ್ ರೆಸ್ಟ್‌ ಮಾಡಲೇಬೇಕೆಂದು ಅವರು ಹೇಳಿದ್ದಾರೆ.

ಚನ್ನರಾಜ ‌ಹಟ್ಟಿಹೊಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಚಾಲಕ ಹಾಗೂ ಗನ್ ಮ್ಯಾನ್‌ ಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದ ಡಾ. ರವಿ ಪಾಟೀಲ ಹೇಳಿದ್ದಾರೆ.

- Advertisement -

ಬೆಳಗಾವಿ ಜಿಲ್ಲೆಯ ಕಿತ್ತೂರ ತಾಲೂಕಿನ ‌ಅಂಬಡಗಟ್ಟಿಯಲ್ಲಿ ಮಂಗಳವಾರ (ಜ.14 ರಂದು) ಮುಂಜಾನೆ ಬೆಂಗಳೂರಿನಿಂದ ಬೆಳಗಾವಿಗೆ ವಾಪಾಸ್‌ ಆಗುತ್ತಿದ್ದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸಹೋದರ ಚನ್ನರಾಜ ‌ಹಟ್ಟಿಹೊಳಿ ಅವರು ಸಂಚರಿಸುತ್ತಿದ್ದ ಕಾರಿಗೆ ನಾಯಿ ಅಡ್ಡಬಂದು ನಿಯಂತ್ರಣ ತಪ್ಪಿ ಕಾರು ಮರಕ್ಕೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಲಕ್ಷ್ಮೀ ಹೆಬ್ಬಾಳಕರ ಬೆನ್ನು, ಮುಖಕ್ಕೆ ಸಣ್ಣಪುಟ್ಟ ಗಾಯವಾಗಿತ್ತು.



Join Whatsapp