ಸಿಟಿ ರವಿ ವಿರುದ್ಧ ಹರಿಹಾಯ್ದ ಲಕ್ಷ್ಮೀ ಹೆಬ್ಬಾಳಕರ್

Prasthutha|

ಬೆಂಗಳೂರು: ಸಿಟಿ ರವಿ ಕಾಂಗ್ರೆಸ್ ಪಕ್ಷದ ವಿರುದ್ಧ ಆರೋಪ ಮಾಡುವ ಭರದಲ್ಲಿ ನಿತ್ಯ ಸುಮಂಗಲಿ ಪದ ಬಳಸಿದ್ದು, ಇದಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ.

- Advertisement -

ವಿಧಾನ ಸಭೆ ಅಧಿವೇಶನದಲ್ಲಿ ಭೋಜನ ವಿರಾಮದ ಬಳಿಕ ವಿಧಾನ ಪರಿಷತ್ ಕಲಾಪದಲ್ಲಿ ನಡೆದ ಚರ್ಚೆ ವೇಳೆ ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣವನ್ನು ಉಲ್ಲೇಖಿಸಿದ ಸಿಟಿ ರವಿ, ಏನು ಮಾಡೋದು ಹೇಳಿ.. ಕೆಲವು ನಿತ್ಯ ಸುಮಂಗಲಿಯರು ಇರ್ತಾರೆ. ಅವರು ಎಲ್ಲಿ ಅಧಿಕಾರ ಇರುತ್ತೋ ಅಲ್ಲಿಗೆ ಹೋಗ್ತಾರೆ ಎಂದಿದ್ದಾರೆ‌.

ಇದಕ್ಕೆ ತಕ್ಷಣವೇ ಆಕ್ಷೇಪ ವ್ಯಕ್ತಡಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಈ ರೀತಿ ಮಾತನಾಡುವುದು ತಪ್ಪು. ದಿನ ನಿತ್ಯ ಮುತ್ತೈದೆ ಅಂದರೆ ಅದಕ್ಕೆ ಅರ್ಥನೇ ಬೇರೆ ಇದೆ. ಅದನ್ನು ತಿಳಿದು ಮಾತನಾಡಿ ಎಂದು ಸಿ.ಟಿ ರವಿಯನ್ನು ತರಾಟೆಗೆ ತೆಗೆದುಕೊಂಡರು.

- Advertisement -

ನಿಮ್ಮ ಮಾತುಗಳನ್ನು ನೋಡಿದರೆ ಮನುಸ್ಮೃತಿ ಸಂಸ್ಕೃತಿಯಿಂದ ನೀವು ಹೊರಬಂದಂತೆ ಕಾಣುತ್ತಿಲ್ಲ. ಇಂದಿನ ಕಾಲಘಟ್ಟ ತುಂಬಾ ಬದಲಾಗಿದ್ದು, ಮಹಿಳೆಯರಿಗೂ ತುಂಬಾ ಅವಕಾಶಗಳು ಸಿಗುತ್ತಿವೆ. ಮಹಿಳಾ ಸಬಲೀಕರಣವೇ ಸರ್ಕಾರದ ಉದ್ದೇಶ. ನೀವು ಇಂಥ ಪದ ಬಳಸುವುದು ಸರಿಯಲ್ಲ ಎಂದು ಸಚಿವರು ತೀವ್ರ ಅಸಹನೆ ವ್ಯಕ್ತಪಡಿಸಿದರು.



Join Whatsapp