ಲೋಕಸಭೆಯಿಂದ ಅನರ್ಹಗೊಂಡ ಲಕ್ಷದ್ವೀಪದ ಸಂಸದ ಮುಹಮ್ಮದ್ ಫಾಝಿಲ್

Prasthutha|

ತಿರುವನಂತಪುರ: ಇತ್ತೀಚೆಗೆ ಕೊಲೆ ಯತ್ನದ ಆರೋಪ ಸಾಬೀತಾದ ಲಕ್ಷದ್ವೀಪದ ಸಂಸದ ಮುಹಮ್ಮದ್ ಫಾಝಿಲ್’ರಿಗೆ ಶಿಕ್ಷೆ ವಿಧಿಸಿದ್ದರಿಂದ ಲೋಕಸಭಾ ಕಾರ್ಯಾಲಯವು ಅವರನ್ನು ಸಂಸತ್ತಿನಿಂದ ಅನರ್ಹಗೊಳಿಸಿರುವುದಾಗಿ ತಿಳಿಸಿದೆ.

- Advertisement -


ಜನವರಿ 11ರಂದು ಲಕ್ಷದ್ವೀಪದ ಕವರತ್ತಿಯ ಸೆಷನ್ಸ್ ಕೋರ್ಟ್, ಕೊಲೆ ಯತ್ನದ ಪ್ರಕರಣದಲ್ಲಿ ಸಂಸದ ಫಾಝಿಲ್’ರಿಗೆ ಶಿಕ್ಷೆ ವಿಧಿಸಿದ್ದರಿಂದ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದಾಗಿ ನೋಟೀಸಿನಲ್ಲಿ ಸ್ಪಷ್ಟಪಡಿಸಲಾಗಿದೆ.


ಭಾರತೀಯ ಸಂವಿಧಾನದ 102(ಐ)(ಇ) ವಿಧಿಯ ಪ್ರಕಾರ ಮತ್ತು 1951ರ ಜನಪ್ರತಿನಿಧಿ ಕಾಯ್ದೆಯ 8ನೇ ವಿಧಿಯ ಪ್ರಕಾರ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

- Advertisement -


“ಜನವರಿ 11, 2023ರಂದು ಕವರತ್ತಿಯ ಸೆಷನ್ಸ್ ಕೋರ್ಟು ಲಕ್ಷದ್ವೀಪದ ಸಂಸದರಾದ ಸಂಸದ ಮುಹಮದ್ ಫಾಝಿಲ್ ಅವರನ್ನು ಅಪರಾಧಿ ಎಂದು ಘೋಷಿಸಿ ಶಿಕ್ಷೆ ವಿಧಿಸಿರುವುದರಿಂದ ಅವರನ್ನು ಕೇಂದ್ರಾಡಳಿತ ಪ್ರದೇಶದ ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಭಾರತೀಯ ಸಂವಿಧಾನದ 102(ಐ)(ಇ) ವಿಧಿಯ ಪ್ರಕಾರ ಮತ್ತು 1951ರ ಜನಪ್ರತಿನಿಧಿ ಕಾಯ್ದೆಯ 8ನೇ ವಿಧಿಯ ಪ್ರಕಾರ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ” ಎಂದು ನೋಟೀಸಿನಲ್ಲಿ ವಿವರಿಸಲಾಗಿದೆ.


2009ರ ಲೋಕ ಸಭಾ ಚುನಾವಣೆ ಸಂದರ್ಭದಲ್ಲಿ ಅನರ್ಹಗೊಂಡ ಸಂಸದ ಫಾಝಿಲ್ ಸಹಿತ ಎಲ್ಲ ಶಿಕ್ಷಿತರಿಗೂ ಕೇಂದ್ರದ ಹಿಂದಿನ ಮಂತ್ರಿ ಮತ್ತು ಕಾಂಗ್ರೆಸ್ ನಾಯಕ ದಿವಂಗತ ಪಿ. ಎಂ. ಸಯೀದ್ ಅವರ ಅಳಿಯ ಮುಹಮ್ಮದ್ ಸಾಲೀಹ್ ಅವರನ್ನು ಕೊಲ್ಲಲು ಪ್ರಯತ್ನ ನಡೆಸಿದ್ದಕ್ಕಾಗಿ ಸೆಷನ್ಸ್ ಕೋರ್ಟು ತಲಾ ಒಂದು ಲಕ್ಷ ರೂಪಾಯಿಗಳ ದಂಡವನ್ನು ಸಹ ವಿಧಿಸಿದೆ.

Join Whatsapp