ಲಖಿಂಪುರ ಹಿಂಸಾಚಾರ| ಕೇಂದ್ರ ಬಿಜೆಪಿ ಸಚಿವರ ಪುತ್ರನ ಶೀಘ್ರ ಬಂಧನ:ಉ.ಪ್ರ ಪೊಲೀಸ್ ಅಧಿಕಾರಿ

Prasthutha|

ಲಕ್ನೋ: ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಉತ್ತರ ಪ್ರದೇಶ ಐಜಿ ಲಕ್ಷ್ಮಿ ಸಿಂಗ್ ತಿಳಿಸಿದ್ದಾರೆ.

- Advertisement -

ಆಶಿಶ್ ಮಿಶ್ರಾ ಅವರನ್ನು ಬಂಧನಕ್ಕೆ ಶೋಧ ಕಾರ್ಯ ಆರಂಭಿಸಲಾಗಿದ್ದು, ಕೊಲೆ ಪ್ರಕರಣ ಸೇರಿದಂತೆ ಆತನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ‘ಆಜ್ ತಕ್’ ಗೆ ಐಜಿ ತಿಳಿಸಿದ್ದಾರೆ.

ಆಶಿಶ್ ಮಿಶ್ರಾ ರೈತರ ಮೇಲೆ ಗುಂಡು ಹಾರಿಸಿ ಕಾರು ಹರಿಸಿ ಕೊಲೆ ನಡೆಸಿದ್ದಾರೆ ಎಂದು ಎಫ್ಐಆರ್ ದಾಖಲಿಸಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

- Advertisement -

“3 ಗಂಟೆ ಸುಮಾರಿಗೆ, ಆಶಿಶ್ ಮಿಶ್ರಾ ಸೇರಿದಂತೆ 15 ರಿಂದ 20 ಶಸ್ತ್ರಸಜ್ಜಿತ ವ್ಯಕ್ತಿಗಳು ಬನ್ಬೀರ್ ಪುರದ ಪ್ರತಿಭಟನಾ ಸ್ಥಳಕ್ಕೆ ಕಾರುಗಳಲ್ಲಿ ಬಂದರು. ಮಿಶ್ರಾ ತನ್ನ ಮಹೀಂದ್ರ ಥಾರ್ ನ ಎಡಭಾಗದಲ್ಲಿ ಕುಳಿತು ರೈತರ ಮೇಲೆ ಗುಂಡು ಹಾರಿಸಿದ್ದಾನೆ. ನಂತರ ರೈತರ ಗುಂಪಿನ ಮೇಲೆಯೇ ಕಾರು ಚಲಾಯಿಸಿದ್ದಾರೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿನ ವೈರಲಾದ ವಿಡಿಯೋಗಳು ಮತ್ತು ಮಾಹಿತಿಯನ್ನು ಬಳಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗಿದೆ ಎಂದು ಐಜಿ ಹೇಳಿದ್ದಾರೆ.

ಆದರೆ, ತನ್ನ ವಿರುದ್ಧದ ಆರೋಪಗಳು ಆಧಾರರಹಿತವಾಗಿವೆ. ಘಟನೆ ನಡೆದ ಭಾನುವಾರ ಬೆಳಗ್ಗೆ 9 ಗಂಟೆಯಿಂದ ತಾನು ಬನ್ವಾರಿಪುರದಲ್ಲಿದ್ದೇನೆ ಎಂದು ಆಶಿಶ್ ಮಿಶ್ರಾ ಹೇಳಿಕೊಂಡಿದ್ದಾನೆ.

Join Whatsapp