ಲಖಿಂಪುರ್ ಹಿಂಸಾಚಾರ| ಆಶಿಶ್ ಮಿಶ್ರಾ ಬಂಧನಕ್ಕೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ಆರಂಭಿಸಿದ ಸಿಧು

Prasthutha|

ನವದೆಹಲಿ: ಲಖಿಂಪುರ್ ಹಿಂಸಾಚಾರದ ಪ್ರಮುಖ ಆರೋಪಿ ಆಶಿಶ್ ಮಿಶ್ರಾ ಬಂಧನಕ್ಕೆ ಒತ್ತಾಯಿಸಿ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

- Advertisement -

ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಚಲಾಯಿಸಿ ಹಲವು ಜೀವಗಳನ್ನು ಬಲಿ ಪಡೆದ ಆರೋಪಿ ಆಶಿಶ್ ಮಿಶ್ರಾನನ್ನು ಬಂಧಿಸುವವರೆಗೂ ಉಪವಾಸ ಮುಂದುವರಿಯುತ್ತದೆ ಎಂದು ಅವರು ತಿಳಿಸಿದ್ದಾರೆ. ದಾಳಿಯಲ್ಲಿ ಸಾವನ್ನಪ್ಪಿದ್ದ ಸ್ಥಳೀಯ ಪತ್ರಕರ್ತ ರಾಮನ್ ಕಶ್ಯಪ್ ಅವರ ನಿವಾಸದಲ್ಲಿ ಸಿದ್ದು ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ.

ಪತ್ರಕರ್ತ ಕಶ್ಯಪ್ ಕುಟುಂಬ ಸದಸ್ಯರನ್ನು ಭೇಟಿ ಮಾಡಿದ ಸಿಧು ಮನೆಯ ಹೊರಗೆ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಈ ಹಿಂದೆ, ಪಂಜಾಬ್ ಸಚಿವ ವಿಜಯ್ ಇಂದರ್ ಸಿಂಗ್ಲಾ, ಶಾಸಕ ಮದನ್ ಲಾಲ್ ಮತ್ತು ಕುಲ್ಜಿತ್ ನಾಗ್ರಾ ಅವರನ್ನೊಳಗೊಂಡ ನಿಯೋಗವು ಪಾಲಿಯಾದಲ್ಲಿ ಮೃತಪಟ್ಟ ರೈತ ಲವ್‌ಪ್ರೀತ್ ಸಿಂಗ್ ಕುಟುಂಬವನ್ನು ಭೇಟಿ ಮಾಡಿತ್ತು.



Join Whatsapp