ರಾಜ್ಯದ ಜೈಲುಗಳಲ್ಲಿ ಕೈದಿಗಳಿಗೆ ಸ್ಥಳಾವಕಾಶದ ಕೊರತೆ: ಸಚಿವ ಪರಮೇಶ್ವರ್

Prasthutha|

ಬೆಂಗಳೂರು: ರಾಜ್ಯದ ಕಾರಾಗೃಹಗಳಲ್ಲಿ ಕೈದಿಗಳಿಗೆ ಸ್ಥಳಾವಕಾಶದ ಕೊರತೆ ಇದೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

- Advertisement -


ವಿಧಾನ ಪರಿಷತ್ ಕಲಾಪದ ವೇಳೆ ಬಿಜೆಪಿಯ ಪ್ರತಾಪ್ ಸಿಂಹ ನಾಯಕ್ ಕಾರಾಗೃಹಗಳ ಬಗ್ಗೆ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ನೀಡಿದ ಸಚಿವರು ಕಾರಾಗೃಹಗಳಲ್ಲಿ ಸ್ಥಳಾವಕಾಶಕ್ಕಿಂತ ಹೆಚ್ಚು ಕೈದಿಗಳಿದ್ದಾರೆ. ರಾಜ್ಯದಲ್ಲಿ 54 ವಿವಿಧ ಮಾದರಿಯ ಕಾರಾಗೃಹಗಳಿವೆ. ಇದರಲ್ಲಿ 28 ಕಾರಾಗೃಹಗಳಲ್ಲಿ ಸ್ಥಳಾವಕಾಶಕ್ಕಿಂತ ಹೆಚ್ಚು ಕೈದಿಗಳನ್ನು ಇರಿಸಲಾಗಿದೆ ಎಂದಿದ್ದಾರೆ.


ರಾಜ್ಯದ ಕಾರಾಗೃಹಗಳಲ್ಲಿ 14,237 ಕೈದಿಗಳಿಗೆ ಅಧಿಕೃತ ಸ್ಥಳಾವಕಾಶವಿದೆ. ಆದರೆ ಇದರಲ್ಲಿ 16,053 ಕೈದಿಗಳನ್ನು ಇರಿಸಲಾಗಿದೆ. ಸ್ಥಳದ ಕೊರತೆ ಇರುವುದರಿಂದ 6 ಹೊಸ ಕಾರಾಗೃಹ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ 8 ಕಾರಾಗೃಹಗಳಲ್ಲಿ ಹೆಚ್ಚುವರಿ ಬ್ಯಾರಕ್ ನಿರ್ಮಿಸಲಾಗುತ್ತಿದೆ. ಇದರಲ್ಲಿ ಸುಮಾರು 3,700 ಕೈದಿಗಳನ್ನು ಇರಿಸಲು ಅವಕಾಶ ಆಗಲಿದೆ. ಇಷ್ಟಾದರೂ ನಮಗೆ ಸ್ಥಳದ ಕೊರತೆ ಇರಲಿದೆ. ಹೀಗಾಗಿ ಹೆಚ್ಚು ಕಾರಾಗೃಹ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.