ಮೂಲ ಸೌಲಭ್ಯಗಳ ಕೊರತೆ;  ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ

Prasthutha|

ಚಿಕ್ಕಮಗಳೂರು:  ಬಲ್ಲಾಳರಾಯನ ದುರ್ಗ ಪ್ರವಾಸಿ ತಾಣಕ್ಕೆ ಹೋಗುವ ಪ್ರವಾಸಿಗರಿಗೆ ಮೂಲ ಸೌಲಭ್ಯ ಒದಗಿಸುವ ಹಾಗೂ ಪ್ರವೇಶ ಶುಲ್ಕ ವಿಧಿಸುವ ಜವಾಬ್ದಾರಿಯನ್ನು ಗ್ರಾಮ ಅರಣ್ಯ ಸಮಿತಿಯ ಮುಖಾಂತರ ಕೈಗೊಳ್ಳದಿರುವ ಅರಣ್ಯ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಯಲಿದ್ದು, ಗ್ರಾಮ ಪಂಚಾಯತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಸುತ್ತಮುತ್ತ ಗ್ರಾಮದ ಮುಖಂಡರು ಪ್ರತಿಭಟನೆಗೆ ಬೆಂಬಲಿಸಿ ಪಾಲ್ಗೊಳ್ಳಲ್ಲಿದ್ದಾರೆ.

- Advertisement -

ಬಲ್ಲಳರಾಯನ ದುರ್ಗ ಪ್ರವಾಸಿ ತಾಣಕ್ಕೆ ಪ್ರವಾಸಿಗರಿಗೆ ಪ್ರವೇಶ ಶುಲ್ಕ ವಿಧಿಸಿ ಕಳೆದ ಮೂರು ವರ್ಷಗಳಿಂದ ಅರಣ್ಯ ಇಲಾಖೆ ಎಕೋ ಟೂರಿಸಂ ಬೋರ್ಡ್ ಮುಖಾಂತರ ನಡೆಸಿಕೊಂಡು ಬರುತ್ತಿದ್ದು, ಗ್ರಾಮಸ್ಥರು ಗ್ರಾಮ ಪಂಚಾಯತಿ ಮುಖಾಂತರ ಅರಣ್ಯ ಇಲಾಖೆಯ ಅಡಿಯಲ್ಲಿ ಇರುವ ಗ್ರಾಮ ಅರಣ್ಯ ಸಮಿತಿ ರಚಿಸಿ ಅದರ ಮುಖಾಂತರ ಪ್ರವಾಸಿಗರಿಗೆ ಮೂಲಭೂತ ಸೌಕರ್ಯ ಒದಗಿಸುವ ಮತ್ತು ಪ್ರವೇಶ ಶುಲ್ಕ ವಿಧಿಸುವ ಜವಾಬ್ದಾರಿಯನ್ನು ನೀಡಲು ಒತ್ತಾಯಿಸಿದ್ದರು. ಅದರಿಂದ ಬರುವ ಆದಾಯದಲ್ಲಿ ಮೂಲ ಸೌಲಭ್ಯ ಕೈಗೊಳ್ಳಲು ಗ್ರಾಮ ಪಂಚಾಯತಿ ಅರಣ್ಯ ಇಲಾಖೆಯನ್ನು ಕೋರಿದ್ದರು.  ಆದರೆ ಇದುವರೆಗೂ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳದೇ ಇರುವುದರಿಂದ ಸಾರ್ವಜನಿಕರು ದಿನಾಂಕ 01/10/2022ರಿಂದ ಗ್ರಾಮ ಅರಣ್ಯ ಸಮಿತಿ ರಚನೆ ಮಾಡುವವರೆಗೆ ಪ್ರವಾಸಿಗರಿಂದ ಪ್ರವೇಶ ಶುಲ್ಕ ವಿಧಿಸದಂತೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.



Join Whatsapp