ತಿರುವನಂತಪುರ: ದಕ್ಷಿಣ ಕುವೈತ್ ನ ಮಂಗಾಫ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕೇರಳದ 13 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಕೊಟ್ಟಾಯಂನ ಚಂಗನಾಶ್ಶೇರಿಯ ಶ್ರೀಹರಿ ಪಿ (27), ಮಲಪ್ಪುರಂನ ಬಾಹುಲೇಯನ್ (36), ಕೊಲ್ಲಂನ ಶಮೀರ್ ಉಮರುದ್ದೀನ್ (30), ಕಾಸರಗೋಡಿನ ಚೆಂಗಳದ ಕೆ. ರೆಂಜಿತ್ (34), ಕಾಸನರಗೋಡಿನ ಪಿಲಿಕೋಡು ನಿವಾಸಿ ಕೇಲು(58), ಕೊಟ್ಟಾಯಂನ ಸ್ಟೆಫಿನ್ ಅಬ್ರಹಾಂ ಸಾಬು(29), ಪತ್ತನಂತಿಟ್ಟದ ಪಂದಳಂನ ಆಕಾಶ್ ಶಶಿಧರನ್ (31), ಕೊಲ್ಲಂನ ಪುನಲೂರಿನ ನಿವಾಸಿ ಸಾಜನ್ ಜಾರ್ಜ್ (29), ಪತ್ತನಂತಿಟ್ಟದ ಕೊನ್ನಿಯ ಸಾಜು ವರ್ಗೀಸ್ (56) ಮತ್ತು ಪಿ.ವಿ.ಮುರಳೀಧರನ್ (68), ಪತ್ತನಂತಿಟ್ಟದ ಲೂಕೋಸ್ (48), ಕೊಲ್ಲಂನ ತಿರುವಲ್ಲಾದ ಥಾಮಸ್ ಉಮ್ಮನ್ (37), ಮಲಪ್ಪುರಂನ ನೂಹು ಮೃತಪಟ್ಟವರು ಎಂದು ತಿಳಿದುಬಂದಿದೆ.
ಹಲವು ಮೃತದೇಹಗಳನ್ನು ಇನ್ನೂ ಗುರುತಿಸಬೇಕಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಕೇರಳ ಸರ್ಕಾರದ ಅನಿವಾಸಿ ಕೇರಳಿಯರ(ಎನ್ಆರ್ಕೆಎಸ್) ಕಲ್ಯಾಣ ಸಂಸ್ಥೆ ತಿಳಿಸಿದೆ.
ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿಶೇಷ ಸಂಪುಟ ಸಭೆಯನ್ನು ಕರೆದಿದ್ದಾರೆ ಎಂದು ತಿಳಿದುಬಂದಿದೆ.